ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ವಾರಾಚರಣೆ


ಪೈವಳಿಕೆ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾಚನಾ ವಾರಾಚರಣೆಯನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರಾಜೇಶ್ವರಿ.ಬಿ ಉದ್ಘಾಟಿಸಿ ಓದುವಿಕೆಯ ಪ್ರಾಧಾನ್ಯತೆಯ ಕುರಿತು ವಿವರಿಸಿದರು.ಶಿಕ್ಷಕ ರವಿಕುಮಾರ್ ಅಧ್ಯಕ್ಷತೆ ವಹಿಸಿ,ವಾಚನಾ ವಾರಾಚರಣೆಯಲ್ಲಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದರು.ಶಾಲಾ ಸಂಪನ್ಮೂಲ ಗುಂಪಿನ ಕಾರ್ಯದರ್ಶಿ ಪ್ರೀಮಾ ಕ್ರಾಸ್ತಾ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಿಕ್ಷಕ ಮೊಹಮ್ಮದ್ ಫಾಹಿಸ್ ಸ್ವಾಗತಿಸಿದರು.ಶಿಕ್ಷಕಿ ಗೀತಾಂಜಲಿ ವಂದಿಸಿದರು.ಶಿಕ್ಷಕರಾದ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರಾದ ಸಾತ್ವಿಕ್ ಎನ್, ಹ್ಯಾರಿಸ್, ಕವಿತಾ ಟೀಚರ್ ಮತ್ತು ಗೋಪಾಲಕೃಷ್ಣ ಭಟ್ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು