ಮನೆಯ ವರ್ಕ್ ಏರಿಯಾದಲ್ಲಿ ಇಡಲಾಗಿದ್ದ ಗ್ಯಾಸ್ ಸಿಲಿಂಡರ್, ಸ್ಟೌ ಕಳವು‌


ಕಾಸರಗೋಡು: ಅಡುಗೆ ಅನಿಲದ (ಎಲ್‌ಪಿಜಿ) ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಮಧೂರು ಎಂಬಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ. ಮಧೂರು ಬಳಿಯ

ಬಿಲಾಲ್‌ನಗರದ ಎಂ. ಮಾಲಿನಿ ದಿವ್ಯದರ್ಶಿನಿ ನೀಡಿದ ದೂರಿನ ಮೇರೆಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಏಪ್ರಿಲ್ 11 ಮತ್ತು ಮೇ 1 ರ ನಡುವಿನ ಅವಧಿಯಲ್ಲಿ ಈ ಕಳವು ನಡೆದಿದೆ ಎಂದು ಮಾಲಿನಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯ ವರ್ಕ್ ಏರಿಯಾದಲ್ಲಿ (ಅಡುಗೆಮನೆಯ ಪಕ್ಕದ ಸಣ್ಣ ಕೊಠಡಿ) ಸಿಲಿಂಡರ್ ಮತ್ತು ಸ್ಟವ್ ಇಡಲಾಗಿತ್ತು. ಇದೇ ಜಾಗದಲ್ಲಿ ಇರಿಸಲಾಗಿದ್ದ ಪಿಕಾಸಿ (ಗುದ್ದಲಿ) ಹಾಗೂ ಕೆಲವು ಕಬ್ಬಿಣದ ವಸ್ತುಗಳು ಕೂಡ ಕಳವಾಗಿವೆ ಎಂದು ದೂರಿನಲ್ಲಿ ಸೇರಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು