ಅಡೂರು ಕ್ಷೇತ್ರದ ಚಿತ್ರ ಅಪಕೀರ್ತಿ ವಿರುದ್ದ ಪ್ರತಿಭಟಿಸಿದ ಹಿಂದೂ ಪ್ರಮುಖರ ವಿರುದ್ದ ಕೇಸು ದಾಖಲು; ವ್ಯಾಪಕ ಖಂಡನೆ


 ಅಡೂರು: ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚಿತ್ರವನ್ನು ಮತಾಂಧರು ಅಪಕೀರ್ತಿಗೊಳಿಸಿದ ಪ್ರಕರಣವನ್ನು ಪ್ರತಿಭಟಿಸಿ ಮೆರವಣಿಗೆ ನಡೆದಿದ ಹಿಂದು  ಮುಖಂಡರುಗಳ ವಿರುದ್ದ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಹಿಂದು ಸಂಘಟನೆಯ ಪ್ರಮುಖರಾದ ಅಕ್ಷಯ್ ರಜಪೂತ್, ಅಭಿಷೇಕ್ ಸರಳಾಯ, ಸತ್ಯನಾರಾಯಣ ಭಟ್, ಸಂಕಪ್ಪ.ಬಿ, ಭರತ್ ಜಿ ಎಂಬಿವರ ವಿರುದ್ದ ಪೊಲೀಸರು ಎಫ್.ಐ.ಆರ್.ದಾಖಲಿಸಿದ್ದಾರೆ.

   ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಭಾವಚಿತ್ರವನ್ನು ಅಪಕೀರ್ತಿಗೊಳಿಸಿದ ಪ್ರಕರಣವನ್ನು ಖಂಡಿಸಿ  ಮೇ.30 ರಂದು ಅಡೂರು ಪೇಟೆಯಿಂದ ಬಸ್ ನಿಲ್ದಾಣದ ವರೆಗೆ ದೊಂದಿ ಮೆರವಣಿಗೆ ನಡೆದಿತ್ತು. ವಿಶ್ವ ಹಿಂದು ಪರಿಷತ್, ಬಜರಂಗದಳ ಅಡೂರು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಯಲ್ಲಿ ನೂರಾರು ಹಿಂದು ಬಾಂಧವರು ಪಾಲ್ಗೊಂಡಿದ್ದರು. ಆದರೆ ಆದೂರು ಪೊಲೀಸರು ಇದನ್ನು ಕಂಡು ಸಹಿಸದೆ ಹಿಂದು ಪ್ರಮುಖರ ಹೆಸರಿನಲ್ಲಿ ಕೇಸು ದಾಖಲಿಸಿದ್ದಾರೆ ಎಂದು ಸ್ಥಳೀಯ ಹಿಂದುಗಳು ದೂರಿದ್ದಾರೆ. ಪೊಲೀಸರ ಕ್ರಮವನ್ನು ವಿವಿದ ಹಿಂದು ಸಂಘಟನೆಗಳು ಖಂಡಿಸಿವೆ.

ಎಸ್.ಎಸ್.ಎಫ್ ಸಂಘಟನೆಯು ದೇವಸ್ಥಾನದ ಚಿತ್ರವನ್ನು ಅಪಕೀರ್ತಿಗೊಳಿಸಿತ್ತು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು