ಕಾಸರಗೋಡು: ಮಂಜೇಶ್ವರ ಚೆಕ್ ಪೋಸ್ಟ್‌ನಲ್ಲಿ ಎಕ್ಸೈಸ್ ಸಿಬ್ಬಂದಿ ನಡೆಸಿದ ವಾಹನ ತಪಾಸಣೆ ವೇಳೆ ಬಸ್‌ನಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಚಿನ್ನದೊಂದಿಗೆ ಒಬ್ಬಾತ ಸಿಕ್ಕಿಬಿದ್ದಿದ್ದಾನೆ. ಪಶ್ಚಿಮ ಬಂಗಾಳ ಮೂಲದ ಸುರ್ಜಿತ್ ಖೋರಾಯ್ ಬಂಧಿತ ಆರೋಪಿ. ಈತನ ಬಳಿಯಿದ್ದ 595.68 ಗ್ರಾಂ ಚಿನ್ನವನ್ನು ಎಕ್ಸೈಸ್ ವಶಪಡಿಸಿಕೊಂಡಿದೆ. ಈತ ಮಂಗಳೂರಿನಿಂದ ಕಾಸರಗೋಡಿಗೆ ಬಸ್‌ನಲ್ಲಿ ಬರುತ್ತಿದ್ದಾಗ ಎಕ್ಸೈಸ್ ಅಧಿಕಾರಿಗಳ ವಾಡಿಕೆಯ ತಪಾಸಣೆ ವೇಳೆ ಚಿನ್ನ ಪತ್ತೆಯಾಗಿದೆ. ಮುಂದಿನ ಕ್ರಮಗಳಿಗಾಗಿ ಪ್ರಕರಣವನ್ನು ರಾಜ್ಯ ಸರಕು ಮತ್ತು ಸೇವಾ ತೆರಿಗೆ (GST) ಇಲಾಖೆಯ ಜಾರಿ ನಿರ್ದೇಶನಾಲಯಕ್ಕೆ (Enforcement Squad) ಹಸ್ತಾಂತರಿಸಲಾಗಿದೆ.
ಮಂಜೇಶ್ವರ ಎಕ್ಸೈಸ್ ಚೆಕ್ ಪೋಸ್ಟ್ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಎ. ಜೋಸೆಫ್, ಎಕ್ಸೈಸ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಗ್ರೇಡ್ ಪಿ. ಸುರೇಶನ್, ಪ್ರಿವೆಂಟಿವ್ ಆಫೀಸರ್ ಗ್ರೇಡ್ ಪ್ರಜಿತ್ ಕುಮಾರ್, ಸಿವಿಲ್ ಎಕ್ಸೈಸ್ ಅಧಿಕಾರಿಗಳಾದ ನಿಖಿಲ್, ಪವಿತ್ರನ್ ಮತ್ತು ರಾಜೇಶ್ ಅವರ ನೇತೃತ್ವದಲ್ಲಿ ಈ ತಪಾಸಣೆ ನಡೆಸಲಾಗಿತ್ತು.