ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಮೃಗಾಸ್ಪತ್ರೆಯ ವತಿಯಿಂದ ದೇಶೀಯ ಜಂತು ರೋಗ ನಿವಾರಣಾ ಯೋಜನೆಯ ಭಾಗವಾಗಿ ಜಾನುವಾರುಗಳಿಗೆ ಕಾಲು ಬಾಯಿ ರೋಗಬಾಧೆಗೆ ಎದುರಾಗಿ ನೀಡುವ ಚುಚ್ಚುಮದ್ದು ಯಜ್ಞದ ಉದ್ಘಾಟನೆ ಶನಿವಾರ ಜರಗಿತು. ಗ್ರಾಮಪಂಚಾಯಿತು ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಉದ್ಘಾಟಿಸಿ ಮಾತನಾಡುತ್ತಾ ವಾರ್ಡು ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಚುಚ್ಚುಮದ್ದು ನೀಡಲಾಗುವುದು. ಇದಕ್ಕೆ ಎಲ್ಲಾ ಕೃಷಿಕರು ಸಹಕರಿಸಬೇಕೆಂದು ಕರೆಯಿತ್ತರು. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರುಗಳಾದ ಶಾಹಿನಾ ಅನ್ವರ್, ಫೌಸಿಯಾ, ಮೃಗಾಸ್ಪತ್ರೆಯ ವೈದ್ಯಾಧಿಕಾರಿ ಡಾ| ಗೋಪಿಕಾ, ಇಲಾಖೆಯ ಪ್ರಮುಖರು ಪಾಲ್ಗೊಂಡಿದ್ದರು.
Tags
ಬದಿಯಡ್ಕ
