ಪೈವಳಿಕೆ ಪಂಚಾಯತ್‌ನಲ್ಲಿ ಅವೈಜ್ಞಾನಿಕ ಕಸ ವಿಲೇವಾರಿ ಪದ್ಧತಿ ಕೈಬಿಡಲು, MCFಗಳಲ್ಲಿ ಕಟ್ಟಿಕೊಂಡಿರುವ ಕಸ ತೆರವುಗೊಳಿಸಲು ಡಿ.ವೈ.ಎಫ್.ಐ.ಒತ್ತಾಯ


 ಪೈವಳಿಕೆ: ಪೈವಳಿಕೆ ಗ್ರಾಮ ಪಂಚಾಯತ್‌ನಲ್ಲಿ ಆಡಳಿತ ಸಮಿತಿಯು ನಿರಂತರವಾಗಿ ಅವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುತ್ತಿದೆ. ಮನೆ ಮನೆಗಳಿಂದ ಹರಿತ ಕರ್ಮ ಸೇನೆ  ಸಂಗ್ರಹಿಸುವ ಪ್ಲಾಸ್ಟಿಕ್ ತ್ಯಾಜ್ಯವನ್ನು MCFಗಳಿಗೆ ತಂದು ಸುರಿಯುತ್ತಿದ್ದು, ಕಿಲೋಗಟ್ಟಲೆ ತ್ಯಾಜ್ಯವು MCF ಒಳಗೆ ಮತ್ತು ಹೊರಗೆ ಬಿದ್ದು ಕೊಂಡಿರುವ ಪರಿಸ್ಥಿತಿ ನಿರ್ಮಾಣವಾಗಿ ದುರ್ವಾಸನೆ ಬೀರಿ ಸಾಂಕ್ರಾಮಿಕ ರೋಗದ ಭೀತಿ ನಿರ್ಮಾಣವಾಗಿದೆ. UDF ನೇತೃತ್ವದ ಪಂಚಾಯತ್ ಆಡಳಿತ ಸಮಿತಿಯ ಈ ತಪ್ಪು ಧೋರಣೆಯನ್ನು ಕೂಡಲೇ ಸರಿಪಡಿಸಬೇಕು ಎಂದು DYFI ಆಗ್ರಹಿಸಿದೆ.

ಪ್ರತಿ ತಿಂಗಳು ಸಂಗ್ರಹವಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಸೂಕ್ತ ಸಂಸ್ಕರಣಾ ವ್ಯವಸ್ಥೆಯನ್ನು ಖಚಿತಪಡಿಸಬೇಕು. ಇದರಿಂದ ಹರಿತ ಕರ್ಮ ಸೇನೆಯ ಕೆಲಸದ ಹೊರೆಯೂ ಕಡಿಮೆಯಾಗುತ್ತದೆ. 

ಮಳೆಗಾಲ ಪೂರ್ವ ಶುಚಿತ್ವ ಕಾರ್ಯ ಸಂಪೂರ್ಣ ವಿಫಲವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಸಮಯವಿದು. MCF ಇರುವ ಸ್ಥಳಗಳಲ್ಲಿ ಮಾರಕ ರೋಗಗಳು ಹರಡುವ ಅಪಾಯವಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿದ 'ಡ್ರೈ ಡೇ' ಕೇವಲ ಜಾಹೀರಾತು ಘೋಷಣೆಯಾಗಿ ಮಾತ್ರ ಉಳಿದಿದೆ.

ತ್ಯಾಜ್ಯವನ್ನು ತುರ್ತಾಗಿ ತೆರವುಗೊಳಿಸಲು ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ತೀವ್ರ ಜನಾಂದೋಲನ ನಡೆಸಲಾಗುವುದು ಎಂದು DYFI ಪಮಂಜೇಶ್ವರ ಬ್ಲೋಕ್ ಸಮಿತಿ ಹೇಳಿಕೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು