ಕಾಸರಗೋಡು: ಕಣಜದ ಹುಳ ದಾಳಿಯಿಂದಾಗಿ ಗಂಭೀರ ಗಾಯಗೊಂಡು ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಎರಿಞಿಪ್ಪುಳ ಮಲಾಂಕಡಪ್ಪಿನ ದಿವಂಗತರಾದ ಕೊಟ್ಟನ್-ಚೋಯಿಚ್ಚಿ ದಂಪತಿಯ ಪುತ್ರಿ ಹಾಗೂ ತಾನದ ಮನೆ ನಿವಾಸಿಯಾದ ಟಿ. ನಾರಾಯಣಿ (77) ಮೃತಪಟ್ಟವರು. ಇವರು ಕೃಷಿ ಕಾರ್ಮಿಕರಾಗಿದ್ದರು.
ಜೂನ್ 19 ರಂದು ಮನೆಯ ಪರಿಸರದಲ್ಲಿದ್ದಾಗ ನಾರಾಯಣಿ ಅವರಿಗೆ ಕಣಜದ ಹುಳ ದಾಳಿ ನಡೆಸಿ ಕಚ್ಚಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದ ಹಿನ್ನೆಲೆಯಲ್ಲಿ ನಿನ್ನೆ (ಸೋಮವಾರ) ರಾತ್ರಿ ಅವರು ಕೊನೆಯುಸಿರೆಳೆದರು. ಮೃತರು
ಮಕ್ಕಳಾದ ದಾಮೋದರನ್, ವಿಜಯಕುಮಾರಿ.
ಸೊಸೆ ಸಿಂಧು (ಅಂಗನವಾಡಿ ಸಹಾಯಕಿ) ಎಂಬಿವರನ್ನು ಅಗಲಿದ್ದಾರೆ.
Tags
ಕಾಞಂಗಾಡ್
