ಉದುಮ: ಬೈಕ್‌ಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಕಾಂಕ್ರೀಟ್ ಮೇಸ್ತ್ರಿ ಮೃತಪಟ್ಟ ಘಟನೆ ನಡೆದಿದೆ. ಉದುಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಂಕ್ರೀಟ್ ನಿರ್ಮಾಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ವೆಣ್ಣೀರ್ ಕುಂಞಿರಾಮನ್ (65) ಮೃತಪಟ್ಟ ಮೇಸ್ತ್ರಿಯಾಗಿದ್ದಾರೆ. ಇಂದು ಮುಂಜಾನೆ ಸುಮಾರು 7 ಗಂಟೆಗೆ ಪಳ್ಳತ್ತ್‌ನ ಧನಲಕ್ಷ್ಮಿ ಬ್ಯಾಂಕ್ ಪರಿಸರದಲ್ಲಿ ಈ ಬೈಕ್ ಅಪಘಾತ ಸಂಭವಿಸಿದೆ. ಮೃತರು ಪತ್ನಿ ಸುಮತಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ
Tags
ಕಾಞಂಗಾಡ್
