ಪಳ್ಳಿಕರೆ ಬಳಿ ಸಮುದ್ರದಲ್ಲಿ ನಾಪತ್ತೆಯಾದ ವಿದ್ಯಾರ್ಥಿಗಳ ಮೃತದೇಹ ಪತ್ತೆ


 ಕಾಸರಗೋಡು: ಪಳ್ಳಿಕರೆಯಲ್ಲಿ ಸಮುದ್ರದಲ್ಲಿ ಸ್ನಾನಕ್ಕಿಳಿದಾಗ ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿವೆ. ಚಂಗನಾಶ್ಶೇರಿ ನಿವಾಸಿ ಅಪ್ಪು ಎಸ್. ಎಬ್ರಹಾಂ (20) ಮತ್ತು ಅವರ ಸ್ನೇಹಿತ ಅಂಕಿತ (20) ಮೃತಪಟ್ಟವರು.

ಎಬ್ರಹಾಂ ಅವರ ಮೃತದೇಹ ಸೋಮವಾರ ಮಧ್ಯಾಹ್ನ 12 ಗಂಟೆಗೆ ಚಿತ್ತಾರಿ  ಬಳಿ ಸ್ಥಳೀಯರಿಗೆ ಪತ್ತೆಯಾಗಿತ್ತು. ಅಂಕಿತ ಅವರ ಮೃತದೇಹ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮುತ್ತುಂತಲ  ಬಳಿ ಕಂಡುಬಂದಿದೆ. ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹಗಳನ್ನು ಕನ್ಹಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಭಾನುವಾರ ಸಂಜೆ ಇಬ್ಬರೂ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. ಬಳಿಕ ಕರಾವಳಿ ಪೊಲೀಸರು, ಸ್ಥಳೀಯರು ಮತ್ತು ಮೀನುಗಾರರು ತಡರಾತ್ರಿಯವರೆಗೆ ಹುಡುಕಾಟ ನಡೆಸಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಊರಿಗೆ ಕೊಂಡೊಯ್ಯಲಾಗುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು