ಕುಂಬ್ಡಾಜೆ: ಪ್ಲಸ್ ಟು (+2) ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಆರ್. ಸಿ. ಪ್ರವಿಷ್ಯಾ ಮತ್ತು ಆಯಿಷತ್ ರಶ್ತಾ ಶೆರಿನ್ ಅವರನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕುಂಬಡಾಜೆ ಮಂಡಲ ಸಮಿತಿಯು ಅಭಿನಂದಿಸಿತು. ಮಂಡಲ ಉಪಾಧ್ಯಕ್ಷ ಸಿದ್ದೀಕ್ ಮುನಿಯೂರು ಅವರ ನೇತೃತ್ವದಲ್ಲಿದ್ದ ನಿಯೋಗದಲ್ಲಿ ಕಾರಡ್ಕ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕರುಣಾಕರನ್ ನಂಬಿಯಾರ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆ. ಯು. ಚೆರೂಣಿ, ಮಾಜಿ ಪಂಚಾಯತ್ ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ, ಮಂಡಲ ಸಾಂಘಿಕ ಜವಾಬ್ದಾರಿಯುಳ್ಳ ಪ್ರಧಾನ ಕಾರ್ಯದರ್ಶಿ ಶರೀಫ್ ಪುತ್ರಕಳ, ಅನಂತು ರೈ, ನಾಯಕರಾದ ಸಿಬಿನ್, ಜೋಜಿ, ಮೊಹಮ್ಮದ್ ಪಾಲಕ್ಕಾರ್, ರಶೀದ್ ಪಾಲಕ್ಕಾರ್, ಅಬ್ದುಲ್ ರಹಮಾನ್ ಬಿ. ಹಾಗೂ ಇತರ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Tags
ಕುಂಬ್ಡಾಜೆ

