ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಆಟೋ ಚಾಲಕರಾಗಿದ್ದ ವಳಮಲೆ ನಿವಾಸಿ ಸುನಿ ಯಾನೆ ಸುರೇಶ್ ರೈ(43) ನಿಧನರಾದರು. ಅವರು ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದರು. ಇಂದು ಬೆಳಗ್ಗೆ ಏಳದೇ ಇದ್ದಾಗ ಮನೆಯವರು ಕೂಡಲೇ ಬದಿಯಡ್ಕ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಮೃತಪಟ್ಟಿರುವುದಾಗಿ ಡಾಕ್ಟರುಗಳು ಹೇಳಿದರೆನ್ನಲಾಗಿದೆ. ದಿವಂಗತ ರಾಧಾಕೃಷ್ಣ ರೈ ಅವರ ಪುತ್ರರಾದ ಅವರು ಅವಿವಾಹಿತರಾಗಿದ್ದರು. ಮೃತರು ತಾಯಿ ಚಂದ್ರಾವತಿ, ಸಹೋದರ ಪ್ರಸನ್ನ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸುರೇಶ್ ರೈ ಅವರು ಸಕ್ರಿಯ ಸಂಘ ಪರಿವಾರ ಕಾರ್ಯಕರ್ತರಾಗಿದ್ದರು.
Tags
ಬದಿಯಡ್ಕ

😥😥 ಓಂ ಶಾಂತಿ:
ಪ್ರತ್ಯುತ್ತರಅಳಿಸಿ