ಕಾಸರಗೋಡು: ಬೈಕ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ಕೊನ್ನಕ್ಕಾಡ್ ಕುಳಿಮಡದ ಶಾರಿಕಾ ನಿವಾಸ್‌ನ ವಿ. ಅನೀಶ್ (42) ಮೃತಪಟ್ಟ ದುರ್ದೈವಿ.
ಕಳೆದ 7 ರಂದು ಸಂಜೆ ಮಾಲೋತ್ ಎಂಬಲ್ಲಿ ಬೈಕ್ ಅಪಘಾತ ಸಂಭವಿಸಿತ್ತು. ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇವರು ಕೊನೆಯುಸಿರೆಳೆದಿದ್ದಾರೆ. ಅಂತ್ಯಸಂಸ್ಕಾರವು ಗುರುವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.
ಮೃತರು ಉಣ್ಣಿಕೃಷ್ಣನ್ ನಾಯರ್ ಮತ್ತು ಶ್ಯಾಮಲಾಕುಮಾರಿ ದಂಪತಿಯ ಪುತ್ರರಾಗಿದ್ದಾರೆ. ಮೃತರು ಪತ್ನಿ ರಜನಿ, ಮಕ್ಕಳಾದ ಅರ್ಜುನ್, ಮೋಳೂಟ್ಟಿ ಎಂಬಿವರನ್ನು ಅಗಲಿದ್ದಾರೆ.
Tags
ಕಾಸರಗೋಡು
