ಎರಡೂವರೆ ವರ್ಷದ ಬಾಲಕನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆ


 ಮುಳ್ಳೇರಿಯ : ಎರಡೂವರೆ ವರ್ಷದ ಬಾಲಕನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.ಮುಳ್ಳೇರಿಯ ಕಾರ್ಲೆಯ ರೋಹಿತ್‌ಶೆಟ್ಟಿ ಮತ್ತು ದಿವ್ಯಾ ದಂಪತಿಯ ಪುತ್ರ ದೇವಾಂಗ ಮೃತಪಟ್ಟ ಬಾಲಕ.

ನಿನ್ನೆ(ಶುಕ್ರವಾರ) ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ನಾಪತ್ತೆಯಾಗಿದ್ದು ಹುಡುಕಾಡಿದಾಗ ಮನೆ ಸಮೀಪದ ಕಂಗಿನ ತೋಟದ ಕೆರೆಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಕೂಡಲೇ ಅಸ್ಪತ್ರೆಗೆ ದಾಖಲಿಸಿದರೂ ಮಗುವಿನ ಜೀವ ಉಳಿಸಲಾಗಲಿಲ್ಲ. ಈತನ ಸಹೋದರ ದೇವಾನುಷ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು