ನೀರ್ಚಾಲು: ಹೃದಯ ಸಂಬಂಧ ಖಾಯಿಲೆಯಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಗೃಹಿಣಿ ಮೃತಪಟ್ಟ ಘಟನೆ ನಡೆದಿದೆ.ನೀರ್ಚಾಲು ಕಡಂಬಳ ನಿವಾಸಿ ಬಾಲನ್ ಅವರಪತ್ನಿ ಸರೋಜಿನಿ(69) ಮೃತಪಟ್ಟವರು. ಅಸೌಖ್ಯದಿಂದಾಗಿ ಇವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಅನಂತರ ಮನೆಗೆ ತರಲಾಗಿತ್ತು. ಮನೆಯಲ್ಲಿ ಇವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದು ಕೂಡಲೇ ಮೃತಪಟ್ಟರೆಂದು ತಿಳಿದು ಬಂದಿದೆ. ಮೃತರು ಪತಿ, ಮಕ್ಕಳಾದ ಶ್ರೀದೇವಿ, ಶ್ರೀಕುಮಾರ್, ಸಂತೋಷ್, ಅಳಿಯ ಹರಿಪ್ರಸಾದ್, ಗೀತ, ಸುನಿತ ಎಂಬಿವರನ್ನು ಅಗಲಿದ್ದಾರೆ.
Tags
ನೀರ್ಚಾಲು
