ಮಾರ್ಪನಡ್ಕದಲ್ಲಿ ಬ್ಯಾಂಕ್ ಕಾವಲುಗಾರನಾದ ಯುವಕನನ್ನು ಇರಿದು ಕೊಲೆ



ಕುಂಬ್ಡಾಜೆ:  ಬ್ಯಾಂಕ್ ಕಾವಲುಗಾರನಾದ ಯುವಕನನ್ನು ಇಬ್ಬರ ತಂಡ ಬರ್ಬರವಾಗಿ ಇರಿದು ಕೊಲೆಗೈದ ದಾರುಣ ಘಟನೆ ಕುಂಬ್ಡಾಜೆ ಮಾರ್ಪನಡ್ಕದಲ್ಲಿ‌‌ ನಿನ್ನೆ (ಆದಿತ್ಯವಾರ) ರಾತ್ರಿ ನಡೆದಿದೆ. ಮಾರ್ಪನಡ್ಕ ಬಳಿಯ ಬೆದ್ರುಕೂಡ್ಲು ನಿವಾಸಿ ಸುರೇಶ್ ಬಿ.ಕೆ(45) ಕೊಲೆಗೀಡಾದ ವ್ಯಕ್ತಿ. ನಿನ್ನೆ ರಾತ್ರಿ 8.30-9 ಗಂಟೆಯ ವೇಳೆ ಮಾರ್ಪನಡ್ಕದಲ್ಲಿ ಕಿರಣ್, ಅಖಿಲೇಶ್ ಎಂಬಿವರು ಸೇರಿ  ಮಾರಕಾಯುಧಗಳಿಂದ ಸುರೇಶ್ ನನ್ನು ಇರಿದಿದ್ದಾರೆ. ಗಂಭೀರ ಗಾಯಗೊಂಡ ಸುರೇಶ್ ನನ್ನು ಸ್ಥಳೀಯರು ಸೇರಿ ಚೆಂಗಳ ಖಾಸಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಆಸ್ಪತ್ರೆಯಲ್ಲಿ ಸುರೇಶನಿಗೆ ತುರ್ತು ಶಸ್ತ್ರಚಿಕಿತ್ಸೆ ನೀಡುವ ಸಿದ್ದತೆ ನಡೆಯುತ್ತಿದ್ದಂತೆಯೇ ಕೊನೆಯುಸಿರೆಳೆದನು ಎಂದು ಪೊಲೀಸರು ತಿಳಿಸಿದ್ದಾರೆ.‌ ಕೊಲೆಗೀಡಾದ ಸುರೇಶ್ ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕಿನ ಮಾರ್ಪನಡ್ಕ ಶಾಖೆಯಲ್ಲಿ ಕಾವಲುಗಾರನಾಗಿದ್ದರು.

ಕ್ರಿಕೆಟ್ ಪಂದ್ಯಾಟ ಸಂಬಂಧ ಉಂಟಾದ ವಾಗ್ಯುದ್ದವೇ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ. ಈ ವಾಗ್ಯುದ್ದವನ್ನು ಮುಗಿಸಲು ಪೊಲೀಸರು ಪ್ರಯತ್ನಿಸಿದ್ದು ವಿಫಲಗೊಂಡಿತ್ತು.
ಘಟನೆಯ ಹಿನ್ನೆಲೆಯಲ್ಲಿ ಮಾರ್ಪನಡ್ಕ ಪೇಟೆಯಲ್ಲಿ ಎಲ್ಲಾ ವ್ಯಾಪಾರ ಸಂಸ್ಥೆಗಳೂ ಮುಚ್ಚಲ್ಪಟ್ಟಿದೆ. ಪೊಲೀಸರು ಬಿಗು ಬಂದೋವಸ್ತು ಏರ್ಪಡಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು