ಬದಿಯಡ್ಕ: ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಬದಿಯಡ್ಕ ಬಳಿಯ ಪೆರಡಾಲ ನಿವಾಸಿ ಮಹಿಳೆ ಬೆಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪೆರಡಾಲ ಪ್ರಶಾಂತಿ ನಿಲಯದ ಕೃಷ್ಣ ಪ್ರಸಾದ್ ರೈ ( ಪೆರಡಾಲ ಎಜುಕೇಶನ್ ಸೊಸೈಟಿ ಮೆನೆಜಿಂಗ್ ಸಮಿತಿ ಸದಸ್ಯ) ಅವರ ಪತ್ನಿ ಪ್ರೇಮಲತ ರೈ (60) ಮೃತಪಟ್ಟವರು. ಮೃತರು ಪುತ್ರಿ ಪ್ರಜ್ಞ (ಇಂಜಿನಿಯರ್ ಬೆಂಗಳೂರು), ಅಳಿಯ ಪ್ರತಿವಿಂದು(ಇಂಜಿನಿಯರ್ ಬೆಂಗಳೂರು), ಸಹೋದರ ಸಹೋದರಿಯರಾದ ಗಂಗಾಧರ ರೈ, ಲೋಕನಾಥ ಶೆಟ್ಟಿ, ಸುರೇಶ್ ರೈ, ಕೃಷ್ಣವೇಣಿ, ಬೇಬಿ, ಕಸ್ತೂರಿ, ಅನುರಾಧ ಎಂಬಿವರನ್ನು ಅಗಲಿದ್ದಾರೆ.
Tags
ಬದಿಯಡ್ಕ
