ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಆಯ್ಕೆ; ಬದಿಯಡ್ಕದಲ್ಲಿ ವಿಜಯೋತ್ಸವ


ಬದಿಯಡ್ಕ:16ನೇ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಘೋಷಿಸಿದ ಹಿನ್ನೆಲೆಯಲ್ಲಿ, ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ವಿಜಯೋತ್ಸವ  ನಡೆಸಲಾಯಿತು. ಸುರಿಯುತ್ತಿರುವ ಭಾರಿ ಮಳೆಯ ನಡುವೆಯೂ ಕಾರ್ಯಕರ್ತರು ಕಿಂಚಿತ್ತೂ ಉತ್ಸಾಹ ಕುಂದದೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ, ಹಿರಿಯ ಕಾಂಗ್ರೆಸ್ ನಾಯಕರಾದ ಪಿ.ಜಿ. ಚಂದ್ರಹಾಸ ರೈ, ತಿರುಪತಿ ಕುಮಾರ್ ಭಟ್, ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ ಗೋಳಿಯಡ್ಕ, ಅಶ್ವತಿ, ಲೀಲಾವತಿ ಹಾಗೂ ನಾಯಕರಾದ ರಾಮ ಪಟ್ಟಾಜೆ, ನಾರಾಯಣ ಭಂಡಾರಿ ನೇತೃತ್ವ ವಹಿಸಿದ್ದರು.

ಲೋಹಿತಾಕ್ಷ ಪಟ್ಟಾಜೆ, ಕುಮಾರನ್ ನಾಯರ್, ರಜನಿ, ರವಿ ಕುಂಡಲಮೂಲೆ, ಕೃಷ್ಣಕುಮಾರ್ ಪಿ., ಗಿರೀಶ್, ನಿಜಿಶ್ ಪಟ್ಟಾಜೆ, ಉದಯ ಕುಂಟಾಲುಮೂಲೆ, ಸತೀಶ್ ಪೆರ್ಮುಂಡೆ, ಖಮರುದ್ದೀನ್, ವಿನ್ಸೆಂಟ್ ವಿದ್ಯಾಗಿರಿ, ಶಾಫಿ ಗೋಳಿಯಡ್ಕ, ಸುಂದರ, ಶಾಫಿ ಗೋಳಿಯಾಡಿ, ಅಪ್ಪು ನಾಯ್ಕ್, ಶರತ್, ಶ್ರೀಜಿತ್, ಶ್ರೇಯಸ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು