ಕ್ಯಾಂಪ್ಕೋ. ಲಿ ಮಂಗಳೂರು ವತಿಯಿಂದ ಸಕ್ರಿಯ ಕೃಷಿಕರಿಗಾಗಿ ಹಮ್ಮಿಕೊಂಡಿರುವ ಸಾಂತ್ವಾನ ಯೋಜನೆಯನ್ವಯ ಬಾಯಾರು ಕ್ಯಾಂಪ್ಕೋ ಶಾಖೆಯ ಸಕ್ರಿಯ ಸದಸ್ಯರೂ ಕ್ಯಾಂಪ್ಕೋ ಸಂಸ್ಥೆಯ ಮಾಜಿ ನಿರ್ದೇಶಕರೂ ಆದ ಶ್ರೀ ಅಶೋಕ್ ಕುಮಾರ್ ಹೊಳ್ಳ ಕುಬಣೂರು ಅವರ ತೆರೆದ ಹೖದಯದ ಶಸ್ತ್ರಚಿಕೆತ್ಸೆಗೆ ಧನಸಹಾಯವಾಗಿ ರೂ *200000* /-( *ಎರಡುಲಕ್ಷ* )ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಯಸ್ ಆರ್ ಸತೀಶ್ಚಂದ್ರ ರವರು ಇದೇ 13.5.2026 ರಂದು ಹೊಳ್ಳರ ಮನೆಯಲ್ಲಿ ವಿತರಿಸಿದರು. ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಶ್ರೀ ಸತೀಶ್ಚಂದ್ರ ಭಂಡಾರಿ ಕೋಳಾರು, ಶ್ರೀ ವೈ ವೆಂಕಟ್ರಮಣ ಭಟ್ ಎಡಮಲೆ, ಶ್ರೀ ಸದಾನಂದ ಶೆಟ್ಟಿ ಕೊಮ್ಮಂಡ, ಶ್ರೀಮತಿ ಸೌಮ್ಯಾ ಪ್ರಕಾಶ್ ಮೀಯಪದವು
ಕ್ಯಾಂಪ್ಕೋ ಬದಿಯಡ್ಕ ವಲಯದ ಪ್ರಬಂಧಕರಾದ ಶ್ರೀ ಚಂದ್ರ ಯಂ, ಕ್ಯಾಂಪ್ಕೋ ಬಾಯಾರು ಶಾಖೆಯ ಪ್ರಬಂಧಕರಾದ ಶ್ರೀ ರಮೇಶ್ ವೈ, ಅಶೋಕ್ ಕುಮಾರ್ ಹೊಳ್ಳರ ಶ್ರೀಮತಿಯವರಾದ ಶ್ರೀಮತಿ.ವಿಜಯಲಕ್ಷ್ಮಿ, ಕ್ಯಾಂಪ್ಕೋ ಸದಸ್ಯರಾದ ಶ್ರೀ ರಾಮಚಂದ್ರ ಮಯ್ಯ ಉಪಸ್ಥಿತರಿದ್ದರು. .
Tags
ಕುಂಬಳೆ
