ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಪ್ರತಿಷ್ಠಾ ದಿನ ಮಹೋತ್ಸವ ಸಂಪನ್ನ


   ಕಾಸರಗೋಡು: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ  ಪ್ರತಿಷ್ಠಾ ದಿನ ಮಹೋತ್ಸವ ಸಂಪನ್ನವಾಯಿತು.  ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಕಾರ್ಯಕ್ರಮಗಳು   ಸಂಪನ್ನವಾಗಿ ಜರಗಿದವು.

 ಮೇ.29 ಶುಕ್ರವಾರ    ಬೆಳಗ್ಗೆ 7 ರಿಂದ ಕ್ರಮಾನುಗತವಾಗಿ ಉಷ ಪೂಜೆ , ಗಣಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶ್ರೀ ದೇವರ ಬಲಿ, ದರ್ಶನಬಲಿ,  ಬಟ್ಟಲು ಕಾಣಿಕೆ ಮಂತ್ರಾಕ್ಷತೆ ಇವು ಜರಗಿದವು. ರಾತ್ರಿ ಶ್ರೀರಂಗ ಪೂಜೆ ಜರಗಿತು. 

ಶ್ರೀ ಗಿರೀಶ ಅಡಿಗ ಕರಿಚೇರಿ ಅವರಿಂದ ದೇವರ ದರ್ಶನಬಲಿ ಜರಗಿದವು.  ಪ್ರಧಾನ ಅರ್ಚಕ ಶ್ರೀ ಅನಂತಪದ್ಮನಾಭ ಮಯ್ಯ ವೈದಿಕ ವಿಭಾಗ ಕಾರ್ಯನಿರ್ವಹಿಸಿದರು. 

ಶ್ರೀ ಸೀತಾರಾಮ ಬಳ್ಳುಳ್ಳಾಯ ಸಮಾರಂಭ ಸಂಯೋಜನೆ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು