ತಿರುವನಂತಪುರಂ: ತಿರುವಂಜೂರು ರಾಧಾಕೃಷ್ಣನ್ ಅವರು ಕೇರಳ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಇಂದು (ಶುಕ್ರವಾರ) ಬೆಳಿಗ್ಗೆ ಪ್ರೊಟೆಮ್ ಸ್ಪೀಕರ್ ಜಿ. ಸುಧಾಕರನ್ ಅವರ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ತಿರುವಂಜೂರು ಅವರು 101 ಮತಗಳನ್ನು ಪಡೆಯುವ ಮೂಲಕ ಸ್ಪೀಕರ್ ಆಗಿ ಆಯ್ಕೆಯಾದರು. ಸಿಪಿಐಎಂನ ಎ. ಸಿ. ಮೊಯ್ದೀನ್ ಅವರಿಗೆ 35 ಮತಗಳು ಮತ್ತು ಬಿಜೆಪಿಯ ಬಿ. ಬಿ. ಗೋಪಕುಮಾರ್ ಅವರಿಗೆ ಮೂರು ಮತಗಳು ಲಭಿಸಿದವು.
Tags
ತಿರುವನಂತಪುರಂ
