ಬದಿಯಡ್ಕದ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಿದ ಯು.ಡಿ.ಎಫ್.ನ ವಿ.ಡಿ. ಸತೀಶನ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ಆಶಾ ಕಾರ್ಯಕರ್ತೆಯರು ಬದಿಯಡ್ಕದಲ್ಲಿ ವಿಜಯೋತ್ಸವ ನಡೆಸಿದರು. ಬದಿಯಡ್ಕ ಬಸ್ ನಿಲ್ದಾಣದ ಆವರಣದಿಂದ ಆರಂಭವಾದ ಮೆರವಣಿಗೆಯು ಪಂಚಾಯತ್ ಕಚೇರಿಯ ಬಳಿ ಮುಕ್ತಾಯಗೊಂಡಿತು.
ಬದಿಯಡ್ಕ ಪಂಚಾಯತ್ ಯು.ಡಿ.ಎಫ್. ಅಧ್ಯಕ್ಷರಾದ ಅನ್ವರ್ ಓಸೋನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಮೀದ್ ಕೆಡಂಜಿ ಮುಖ್ಯ ಭಾಷಣ ಮಾಡಿದರು. ಆಶಾ ಕಾರ್ಯಕರ್ತೆ ಸತ್ಯಭಾಮ ಸ್ವಾಗತಿಸಿ, ಸುಜಾತ ಸಿ.ಎಚ್. ವಂದಿಸಿದರು.
Tags
ಬದಿಯಡ್ಕ
