ಕಾಸರಗೋಡು: ಜುಲೈ 10,11,12 ತಾರೀಕಿನಂದು ಕಾಸರಗೋಡಿನಲ್ಲಿ ನಡೆಯುವ ಬಾಲಗೋಕುಲ ರಾಜ್ಯ ವಾರ್ಷಿಕ ಸಮ್ಮೇಳನದ ಸ್ವಾಗತ ಸಂಘರೂಪಿಕರಣ ನಡೆಯಿತು. ರಾಜ್ಯ ಅಧ್ಯಕ್ಷ ಎಂ ಸತ್ಯನ್ ಮಾಸ್ಟರ್ ಅವರ ನೇತೃತ್ವದಲ್ಲಿ ಅಮೃತಾನಂದಮಯಿ ಮಠ ಕಾಸರಗೋಡು ಮಠಾಧಿಪತಿ ವೇದ ವೇದ್ಯಮೃತ ಚೈತನ್ಯ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಬಾಲಗೋಕುಲ ರಾಜ್ಯ ಉಪಾಧ್ಯಕ್ಷ ಎನ್ ವಿ ಪ್ರಜಿತ್ ಮಾಸ್ಟರ್ ಮುಖ್ಯ ಭಾಷಣ ಮಾಡಿದರು. ಬಾಲಗೋಕುಲ ರಾಜ್ಯ ಪ್ರಧಾನ ಕಾರ್ಯದರ್ಶಿ ಏನ್ ಎಂ ಸದಾನಂದನ್, ಪ್ರಭಾಕರನ್ ಮಾಸ್ಟರ್, ಸಿ ವಿ ಪೋದುವಳ್, ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ಮೊವ್ವರ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಬಾಲಗೋಕುಲ ಜಿಲ್ಲಾ ರಕ್ಷಾಧಿಕಾರಿ ಜಯರಾಮ್ ಶೆಟ್ಟಿ ಸ್ವಾಗತ, ಜಿಲ್ಲಾ ಅಧ್ಯಕ್ಷರಾದ ದಿನೇಶ್ ಮಾಸ್ಟರ್ ವಂದನಾರ್ಪಣೆ ಮಾಡಿದರು. ಸಮ್ಮೇಳನವನ್ನು ವಿಜಯಗೊಳಿಸುವ ಭಾಗವಾಗಿ ಕಾರ್ಯಕ್ರಮದ ಚೇರ್ಮೆನರಾಗಿ ಸಿ ವಿ ಪೋದುವಳ್ , ವರ್ಕಿಂಗ್ ಚೇರ್ಮನರಾಗಿ ರಿಟೈರ್ಡ್ ಎಸ್. ಪಿ ಹರಿಶ್ಚಂದ್ರ ನಾಯಕ್, ಜನರಲ್ ಕನ್ವಿನರಾಗಿ ರಾಜೇಂದ್ರ ಮಾವ್ವರ್ ಮತ್ತು ಖಜಾಂಜಿಯಾಗಿ ರಾಧಾಕೃಷ್ಣನ್ ಅವರನ್ನು ಸೇರಿ 501 ಸದಸ್ಯರನ್ನು ಸೇರಿಸಿ ಸ್ವಾಗತ ಸಂಘ ರೂಪಿಕರಣ ಮಾಡಲಾಯಿತು.
Tags
ಕಾಸರಗೋಡು
