ಅಧಿಕಾರಕ್ಕೇರಿದ ನೂತನ ಸರಕಾರ; ಹರ್ಷಾಚರಣೆ ನಂತರ ಪಟಾಕಿ ಸಿಡಿದು 9 ವರ್ಷದ ಬಾಲಕ ಮೃತ್ಯು


ಕಣ್ಣೂರು: ವಿ. ಡಿ. ಸತೀಶನ್ ನೇತೃತ್ವದ ಸಚಿವ ಸಂಪುಟವು ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ನಡೆಸಿದ ಮೆರವಣಿಗೆಯ ಬೆನ್ನಲ್ಲೇ ಪಟಾಕಿ ಸಿಡಿದು ಒಂಬತ್ತು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಅಳೀಕೋಡ್‌ನ ಪುನ್ನಕ್ಕಪ್ಪಾರೆಯ ಕುಂಞಿ ಕಿಳಕ್ಕಯಿಲ್ ಮನೆಯ ಅಮಾನ್ (9) ಮೃತಪಟ್ಟ ಬಾಲಕ. ಈ  ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ.

ವಿ. ಡಿ. ಎಸ್. ಸರ್ಕಾರ ಅಧಿಕಾರಕ್ಕೇರಿದ ಸಂತೋಷದಲ್ಲಿ ಪುಣ್ಣಾಕ್ಕಪ್ಪಾರೆ ಕಾಂಗ್ರೆಸ್ ಕಚೇರಿ ಪರಿಸರದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿದ್ದರು. ಬಳಿಕ ಬಾಕಿ ಉಳಿದಿದ್ದ ಪಟಾಕಿಗಳನ್ನು ಕಚೇರಿಯ ಸಮೀಪದಲ್ಲೇ ಸಂಗ್ರಹಿಸಿಡಲಾಗಿತ್ತು. ಈ ಸ್ಥಳಕ್ಕೆ ಬಂದ ಮಕ್ಕಳು ಪಟಾಕಿಗೆ ಕಿಡಿ ಹಚ್ಚಿ ಎಸೆಯುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಅಮಾನ್‌ನ ಕುತ್ತಿಗೆಯ ಭಾಗಕ್ಕೆ ಪಟಾಕಿ ಬಡಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಮಾನ್‌ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಅಳೀಕೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು