ಬದಿಯಡ್ಕ ಬಳಿಯ ಕನಕಪಾಡಿ ನಿವಾಸಿ ದುಬೈಯಲ್ಲಿ ಕುಸಿದು ಬಿದ್ದು ಮೃತ್ಯು


ಬದಿಯಡ್ಕ: ಬದಿಯಡ್ಕಬಳಿಯ ಕನಕಪ್ಪಾಡಿ ನಿವಾಸಿ ಕೊಲ್ಲಿ
 ದುಬೈನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ‌ನಡೆದಿದೆ. ಬದಿಯಡ್ಕ ಬಾರಡ್ಕದ ಕನಕಪಾಡಿ ನಿವಾಸಿ ದಿ. ಬೆನ್ನಿ ಡಿ.ಸೋಜಾ ಮತ್ತು ಲೂಸಿ ದಂಪತಿಯ ಪುತ್ರ ಹೆನ್ರಿ ಡಿ.ಸೋಜಾ (58) ಮೃತ ವ್ಯಕ್ತಿ. ಈ ಹಿಂದೆ ಕಾಸರಗೋಡು-ಬೆಳಿಂಜ ಸಹಿತ ವಿವಿದ ರೂಟುಗಳಲ್ಲಿ ಸಾಗುವ ಖಾಸಗಿ ಬಸ್‌ ಚಾಲಕರಾಗಿದ್ದ ಇವರು ಕಳೆದ 35 ವರ್ಷಗಳಿಂದ ದುಬೈನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದರು. ನಿನ್ನೆ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರ ಜೀವ ಉಳಿಸಲಾಗಲಿಲ್ಲ.
ಕಳೆದ ಮೂರು ವರ್ಷಗಳಿಂದ  ತೊಕ್ಕೊಟ್ಟಿನಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ಸವಿತಾ ಮೊಂತೆರೋ, ಮಕ್ಕಳಾದ ಸೋನಾಲ್ ಡಿ.ಸೋಜಾ, ಮತ್ತು ಶಾನನ್ ಡಿ.ಸೋಜಾ. ಸಹೋದರರಾದ ವಿನ್ಸೆಂಟ್ ಡಿ'ಸೋಜಾ, ಗ್ರೇಸಿ ಡಿ'ಸೋಜಾ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು