ವಿಷು ಆಚರಣೆಯ ಸಂದರ್ಭದಲ್ಲಿ ಪಟಾಕಿ ಸಿಡಿದು 16 ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಕೋಜಿಕ್ಕೋಡ್, ಕೊಯಿಲಾಂಡಿಯ ಅದ್ವೈತ್ (16) ಮೃತಪಟ್ಟ ಬಾಲಕ.
ಗೆಳೆಯರೊಂದಿಗೆ ವಿಷು ಆಚರಿಸುತ್ತಿದ್ದಾಗ ಅದ್ವೈತ್ ಕೈಯಲ್ಲಿದ್ದ ಸಿಡಿಮದ್ದು (ಗುಂಡು) ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಆತ ಮೃತಪಟ್ಟಿದ್ದನು. ಕೊಯಿಲಾಂಡಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tags
ಕೋಜಿಕ್ಕೋಡ್
