ವಿಷು ಹಬ್ಬದ ಊಟ ಮುಗಿಸಿ ಮನೆಯಿಂದ ಹೊರಗೆ ಹೋದ ವ್ಯಕ್ತಿಯ ಮೃತದೇಹ ನಿರ್ಮಾಣ ಹಂತದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಕಾಸರಗೋಡು: ವಿಷು ಸದ್ಯ (ಹಬ್ಬದ ಊಟ) ಸವಿದ ನಂತರ ಮನೆಯಿಂದ ಹೊರಗೆ ಹೋದ ವ್ಯಕ್ತಿಯೊಬ್ಬರ ಮೃತದೇಹ, ನಿರ್ಮಾಣ ಹಂತದಲ್ಲಿರುವ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದೆ. ಮುಳಿಯಾರು, ಕಾನತ್ತೂರು, ಕಿಳಕ್ಕೇಕ್ಕರ ಲಕ್ಷಂ ವೀಡು 'ಉನ್ನತಿ' ನಿವಾಸಿ ಕೃಷ್ಣನ್ (75) ಮೃತಪಟ್ಟವರು.

ವಿಷು ಹಬ್ಬದ ದಿನದಂದು ಸಂಜೆ ಸುಮಾರು ಐದು ಗಂಟೆಯ ವೇಳೆಗೆ ಇವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆದೂರು ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಭವಾನಿ,

 ಮಕ್ಕಳಾದ ಚಂದ್ರಹಾಸ, ಅನೀಶ್, ಅಜಯನ್, ವಿಜಯನ್, ಅಶ್ವತಿ.ಸಹೋದರರಿಯರಾದ ಕಮಲಾಕ್ಷಿ, ಶಾಂತಿ, ಲಕ್ಷ್ಮಿ ಎಂಬಿವರನ್ನು ಅಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು