ಅತೀ ಹೆಚ್ಚು ಸಲ‌ ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ಆಲಿಸಿದ ಬೂತು ಅಧ್ಯಕ್ಷರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಭಿನಂದನೆ


 ಬೆಳ್ಳೂರು: ಅತೀ ಹೆಚ್ಚು ಸಲ‌ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಆಲಿಸಿದ ಬೂತು ಅಧ್ಯಕ್ಷರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಭಿನಂದನೆ. 


ಬೆಳ್ಳೂರು ಪಂಚಾಯತು ಹಳೆಯ  90 (ಹೊಸ ಬೂತು 104) ಅಧ್ಯಕ್ಷ ಪುಳಿತ್ತಡಿ ನಡುವೆ ನಿವಾಸಿ  ಪ್ರದೀಪ್ ಕುಮಾರ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ   ನಬೀನ್ ನೇರವಾಗಿ ಅಭಿನಂದಿಸಿದ್ದಾರೆ.‌ 


ಕೃಷಿಕರಾದ ಪ್ರದೀಪ್ ಕುಮಾರ್ ಅವರು ನಿರಂತರ ಒಂದು ವರ್ಷಗಳ ಕಾಲ ತನ್ನ ಬೂತಿನಲ್ಲಿ ಇತರ ಕಾರ್ಯಕರ್ತರ ಜತೆ ಸೇರಿ ಮನ್ ಕೀ ಬಾತ್ ವೀಕ್ಷಿಸಿದ್ದು, ಇದರ ಚಿತ್ರವನ್ನು ಸರಳ್ ಆ್ಯಪ್ ಮೂಲಕ  ಅಪ್ ಲೋಡ್ ಮಾಡಿದ್ದು ಇದನ್ನು ‌ಮನಗಂಡ ಬಿಜೆಪಿ ಅಧ್ಯಕ್ಷರು ಅಭಿನಂದನೆ ಪತ್ರ ನೀಡಿದ್ದಾರೆ.

 ಅಭಿನಂದನೆಯ ಜತೆ ಒಂದು ಶಾಲು ಸಹ ಕಳುಹಿಸಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು