ಕಾಸರಗೋಡು ನಗರ ಸಭಾ ವ್ಯಾಪ್ತಿಯಲ್ಲಿ ಎನ್.ಡಿ.ಎ.ಕುಟುಂಬ ಸಂಗಮ
byGADINAADU-
0
ಕಾಸರಗೋಡು: ಕಾಸರಗೋಡು ನಗರಸಭಾ ವ್ಯಾಪ್ತಿಯ 165 ನೇ ನಂಬರ್ ಬೂತು ಎನ್.ಡಿ.ಎ ಕುಟುಂಬ ಸಂಗಮ ನಡೆಯಿತು. ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಉದ್ಘಾಟಿಸಿದರು. ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದರು.
ನಗರ ಸಭಾ ಸಧ್ಯ ರವೀಂದ್ರ ಪೂಜಾರಿ, ಬೂತ್ ಅಧ್ಯಕ್ಷ ಸೋಮಶೇಖರ, ಕಾರ್ಯದರ್ಶಿ ಸುಬ್ರಹ್ಮಣ್ಯ, ಹಿರಿಯ ಮುಖಂಡ ಸುರೇಂದ್ರ ಪೂಜಾರಿ, ಮಧೂರು ವೆಸ್ಟ್ ಏರಿಯ ಅಧ್ಯಕ್ಷ ಮಾಧವ ಮಾಸ್ತರ್, ಶೃತಿ ಮೊದಲಾದವರು ಮಾತನಾಡಿದರು.