ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಅಡಿಕೆ ಹೇರಿದ ವ್ಯಾನು; ಚಾಲಕನಿಗೆ ಗಾಯ, ಅಪಾರ ನಾಶ ನಷ್ಟ


 ಬೆಳ್ಳೂರು: ಅಡಿಕೆ ಹೇರಿ ಸಾಗುತ್ತಿದ್ದ ಇಕೊ  ವ್ಯಾನು ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದು ಅಪಾರ ಹಾನಿ ಉಂಟಾಗಿದೆ.

 ಬೆಳ್ಳೂರು ಕಲ್ಲಗ ಪಡ್ಡೈಮೂಲೆ ಸುರೇಶ್ ಎಂಬವರ ಮನೆಯ ಮೇಲೆ ವಾಹನ ಬಿದ್ದಿದೆ. ಇದರಿಂದಾಗಿ ಮನೆ ಪೂರ್ಣ ದ್ವಂಸಗೊಂಡಿದೆ.  ಮನೆಯಲ್ಲಿ ಮಕ್ಕಳು ಸಹಿತ ಹಲವರಿದ್ದರೂ ಯಾರಿಗೂ ಗಾಯಗಳಾಗಿಲ್ಲ. ವಾಹನ ಚಾಲಕನೂ ಸಣ್ಣಪುಟ್ಟ ಗಾಯಗಳೊಂದಿಗೆ‌ ಪಾರಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು