ಬಸ್ಸು ಚಲಾಯಿಸುತ್ತಿರುವ ವೇಳೆ ಚಾಲಕನಿಗೆ ಹೃದಯಾಘಾತವುಂಟಾಗಿದ್ದು ನಿಯಂತ್ರಣ ತಪ್ಪಿದ ಬಸ್ಸು ಅಂಗಡಿಗೆ ನುಗ್ಗಿದ ಘಟನೆ ನಡೆದಿದೆ. ಮಾವೇಲಿಕ್ಕರ-ನಡಕಾವ್ ಎಂಬಲ್ಲಿ ಇಂದು (ಗುರುವಾರ) ಬೆಳಗ್ಗೆ 9 ಗಂಟೆಗೆ ಈ ಘಟನೆ ನಡೆದಿದೆ. ಬಸ್ಸು ಚಲಿಸುತ್ತಿರುವ ವೇಳೆ ಚಾಲಕ ಪ್ರದೀಪ್ ನಿಗೆ ಹೃದಯಾಘಾತ ಉಂಟಾಗಿದ್ದು ಕುಸಿದು ಬಿದ್ದರೆನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ಸು ಅಂಗಡಿಗೆ ನುಗ್ಗಿದ್ದು ನಾಶ ನಷ್ಟ ಉಂಟಾಗಿದೆ. ಆದರೆ ಪ್ರಯಾಣಿಕರು ಗಾಯಗಳಿಲ್ಲದೆ ಪಾರಾಗಿದ್ದಾರೆ. ಚಾಲಕ ಪ್ರದೀಪ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Tags
ತಿರುವನಂತಪುರಂ
