ಕಣ್ಣೂರು: ಕೆ.ಎಸ್.ಯು. ಕಾರ್ಯಕರ್ತರ ಕರಿಬಾವುಟ ಪ್ರದರ್ಶನದ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಇಂದು (ಶುಕ್ರವಾರ) ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಅವರು ಇಂದು ಮುಂಜಾನೆ ಕಣ್ಣೂರು ಪೆರಿಯರಂ ಮೆಡಿಕಲ್ ಕಾಲೇಜಿನಿಂದ ಬಿಡುಗಡೆಗೊಂಡಿದ್ದು ತಿರುವನಂತಪುರಕ್ಕೆ ಪ್ತಯಾಣ ಬೆಳೆಸಿದರು. ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಅವರ ತಪಾಸಣೆ ನಡೆಯಲಿದೆ.
ಬುದವಾರ ಸಾಯಂಕಾಲ ಕಣ್ಣೂರು ರೈಲು ನಿಲ್ದಾಣಕ್ಕೆ ತಲುಪಿದ ವೀಣಾ ಜಾರ್ಜ್ ಅವರಿಗೆ ಕೆ.ಎಸ್.ಯು ಕಾರ್ಯಕರ್ತರು ಕರಿಬಾವುಟ ಪ್ರದರ್ಶಿಸಿದ್ದರು. ಈ ವೇಳೆ ಸಚಿವರಿಗೆ ಗಾಯವಾಗಿತ್ತೆನ್ನಲಾಗಿದೆ. ಘಟನೆಯ ನಂತರ ರಾಜ್ಯಾದ್ಯಂತ ವ್ಯಾಪಕ ಹಿಂಸಾಚಾರ ನಡೆದಿದ್ದು ಹಲವು ಕಾಂಗ್ರೆಸ್ ಕಚೇರಿಗಳು ದ್ವಂಸಗೊಂಡಿದ್ದವು. ಈ ಪ್ರಕರಣದಲ್ಲಿ 5 ಮಂದಿ ಕೆ.ಎಸ್.ಯು.ಕಾರ್ಯಕರ್ತರನ್ನು ಬಂಧಿಸಲಾಗಿದೆ.
Tags
ಕಣ್ಣೂರು
