ಟೈಲ್ಸ್ ಕಾರ್ಮಿಕನಾದ ಯುವಕನ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಬದಿಯಡ್ಕ: ಟೈಲ್ಸ್ ಕಾರ್ಮಿಕನಾದ ಯುವಕನ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಿಲಾಂಕಟ್ಟೆ ಬಳಿಯ ಉಬ್ರಂಗಳ ದಿವಂಗತರಾದ ರಘುರಾಮ- ರಾಧ ದಂಪತಿಯ ಪುತ್ರ ಚಂದ್ರಶೇಖರ(30) ಮೃತಪಟ್ಟವರು. ನಿನ್ನೆ (ಗುರುವಾರ) ರಾತ್ರಿ 8 ಗಂಟೆಯ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಅವಿವಾಹಿತರಾದ ಇವರು ಸಹೋದರ ಸಹೋದರಿಯರಾದ ರಾಧಿಕ, ಚಂದ್ತಿಕ, ರೇಣುಕ, ಚಂದ್ರಕಲ, ಚಂದ್ರಪ್ರಭ, ಚಂದ್ರಕಾಂತ, ಚಂದ್ರಹಾಸ ಎಂಬಿವರನ್ನು ಅಗಲಿದ್ದಾರೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು