ನಾಲಂದ ಕಾಲೇಜು ಆಫ್ ಆರ್ಟ್ಸ್ ಅಂಡ್ ಸೈನ್ಸ್ ಪೆರ್ಲ ಕಾಲೇಜಿನ ದ್ವಿತೀಯ ವರ್ಷದ ಬಿ ಎ ಅರ್ಥಶಾಸ್ತ್ರ ವಿದ್ಯಾರ್ಥಿಗಳು ಹಾಸ್ಪಿಟಲ್ ಎಕನಾಮಿಕ್ಸ್ ಪಠ್ಯದ ಅಂಗವಾಗಿ ಫೆಬ್ರವರಿ 16 2026ರಂದು ಡಿಸ್ಟ್ರಿಕ್ಟ್ ಕೋಪರೇಟಿವ್ ಹಾಸ್ಪಿಟಲ್ ಗೆ ಅಧ್ಯಯನ ಭೇಟಿಯನ್ನು ನಡೆಸಿದರು
ಆಸ್ಪತ್ರೆಯ ಕಾರ್ಯಾಚರಣ ಸೂಚಕಗಳನ್ನು ಗಣನೆ ಮಾಡುವ ಉದ್ದೇಶದಿಂದ ಈ ಭೇಟಿ ಆಯೋಜಿಸಲಾಗಿತ್ತು ಆಸ್ಪತ್ರೆಯ ಕಾರ್ಯದರ್ಶಿ, ಶ್ರೀ ಪ್ರದೀಪ್ ಹಾಗೂ ಮೆಡಿಕಲ್ ಸುಪರಿಟಂಡ್ಂಟ್ ಶ್ರೀಮತಿ ಸರಸ್ವತಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಂಪೂರ್ಣ ಸಹಕಾರ ನೀಡಿದರು
ಈ ಅಧ್ಯಯನ ಭೇಟಿಯಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಇನ್ ಚಾರ್ಜ್ ಶ್ರೀ ಶಂಕರಾ ಖಂಡಿಗೆ ಹಾಗೂ ಅರ್ಥಶಾಸ್ತ್ರ ಸಹಪ್ರಾಧ್ಯಾಪಕಿ ಶ್ರೀಮತಿ ಅನುಪಮಾ ಟಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳ ತಾತ್ವಿಕ ಜ್ಞಾನವನ್ನು ಪ್ರಾಯೋಗಿಕ ಅನುಭವದೊಂದಿಗೆ ಸಂಯೋಜಿಸುವ ಮಹತ್ವದ ಶೈಕ್ಷಣಿಕ ಕಾರ್ಯಕ್ರಮವಾಗಿ ಪರಿಣಮಿಸಿತು
Tags
ಪೆರ್ಲ
