ಬಂದ್ಯೋಡಿನಲ್ಲಿ ರಸ್ತೆ ಅಫಘಾತ; ಮಂಗಳೂರು‌ ನಿವಾಸಿ ಮೃತ್ಯು, ಓರ್ವನ ಸ್ಥಿತಿ ಚಿಂತಾಜನಕ


 ಕುಂಬಳೆ: ಬಂದ್ಯೋಡಿನಲ್ಲಿ ನಡೆದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಓರ್ವ‌ ಮಂಗಳೂರು ಆಸ್ಪತ್ರೆಯಲ್ಲಿ ‌ಮೃತಪಟ್ಟಿದ್ದಾರೆ. ಮಂಗಳೂರು ಯೇನಕಲ್ಲು ಪಡಿಯಡ್ಕ ನಿವಾಸಿ ನಿರಂಜನ (24) ಮೃತಪಟ್ಟವರು. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಇಂದು (ಬುದವಾರ) ಅವರು ಕೊನೆಯುಸಿರೆಳೆದರು. ಇವರ ಜೊತೆಯಲ್ಲಿದ್ದ ಮಂಗಳೂರು ಶಕ್ತಿನಗರ ನಿವಾಸಿ ಕೃತಿಕ್ ಬೆನ್ನಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.

     ‌ಇಂದು (ಬುದವಾರ) ಮುಂಜಾನೆ 12.30 ಕ್ಕೆ ಅಪಘಾತ ನಡೆದಿದೆ. ನಿರಂಜನ, ಬೆನ್ನಿ ಸಹಿತ ಗೆಳೆಯರು ಬೈಕಿನಲ್ಲಿ ಮಂಗಳೂರು ಕಡೆಗೆ ಸಾಗುತ್ತಿದ್ದಾಗ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತ ಉಂಟಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು