ಕಾಸರಗೋಡು : ಉಳಿಯ ಧನ್ವಂತರಿ ಸನ್ನಿಧಿಯಲ್ಲಿ ವರ್ಷಂ ಪ್ರತಿ ಜರಗುವ ಭದ್ರಕಾಳಿ ಪಾಟ್ ಉತ್ಸವವು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ನೇತೃತ್ವದಲ್ಲಿ ಜರುಗಿತು. ಇದರ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಗಣಪತಿ ಹವನ, ಮಹಾಪೂಜೆ, ಸಾಯಂಕಾಲ ಶ್ರೀ ದುರ್ಗಾ ಪೂಜೆ ಅಲ್ಲದೇ ನೈಸರ್ಗಿಕ ಬಣ್ಣಗಳಿಂದ ಧಾರಿಕಾ ವಧೆಯ ಭದ್ರಕಾಳಿಯ ವರ್ಣ ಚಿತ್ರವನ್ನು ರೂಪಿಸಿ ತೈಯಂಬಾಡಿಯವರ ಪಾಟ್ ನಿಂದ ಈ ವಿಶೇಷ ಪೂಜೆಯು ಸಂಪನ್ನಗೊಂಡಿತು.
Tags
ಕಾಸರಗೋಡು
