ನಿವೃತ್ತ ಸೈನಿಕನ‌‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

 


ನೆಕ್ರಾಜೆ: ರಾತ್ರಿ ಊಟ ಮಾಡಿ ಮಲಗಿದ ನಿವೃತ್ತ ಸೈನಿಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೆಕ್ರಾಜೆ ಪುಂಡೂರಿನ ದಿವಂಗತರಾದ ರಾಮನ್- ಚಿತ್ತೇಯಿ  ದಂಪತಿಯ ಪುತ್ರ ಗೋಪಾಲನ್(64) ಮೃತಪಟ್ಟವರು.ನಿನ್ನೆ ರಾತ್ರಿ ಅವರು ಊಟ ಮಾಡಿ‌ ಮಲಗಿದ್ದು ಇಂದು ಬೆಳಗ್ಗೆ ಹಾಸಿಗೆಯಲ್ಲಿ ‌ಕಾಣಲಿಲ್ಲ. ಹುಡುಕಾಡಿದಾಗ ಬಾವಿಯ ಬಳಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ‌ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು.

      ಮೃತರು ಪತ್ನಿ ಶೈಲಜ, ಮಕ್ಕಳಾದ ದಿವ್ಯ, ದೀಪಕ್, ಅಳಿಯ ಟಿ.ರಜೀಶ್, ಸಹೋದರ ಸಹೋದರಿಯರಾದ ಕೃಷ್ಣನ್, ಕುಮಾರನ್, ಭಾಸ್ಕರನ್, ಸರೋಜಿನಿ ಎಂಬಿವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು