ಸೀತಾಂಗೋಳಿ: ಎರಡು ವಾಹನಗಳಲ್ಲಿ ಸಾಗಿಸುತ್ತಿದ್ದ 345.6 ಲೀಟರ್ ಗೋವಾ ನಿರ್ಮಿತ ವಿದೇಶ ಮದ್ಯವನ್ನು ಎಕ್ಸ್ಪ್ರೆಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮದ್ಯ ಸಾಗಿಸಿದ ಮಹೀಂದ್ರಾ ಬೊಲೆರೊ, ಮಾರುತಿ ಓಮ್ನಿ ವಾಹನಗಳನ್ನು ವಶಪಡಿಸಲಾಗಿದೆ. ಆರೋಪಿಗಳು ವಾಹನ ಬಿಟ್ಟು ಓಡಿ ಪರಾರಿಯಾಗಿದ್ದಾರೆ.
ಇಂದು (ಮಂಗಳವಾರ) ಬೇಳ ಸಮೀಪದ ದೊಡ್ಡಡ್ಕ ಎಂಬಲ್ಲಿ ಕಾಸರಗೋಡು ಎಕ್ಸ್ಪ್ರೆಸ್ ಎನ್ಫೋರ್ಸ್ ಮೆಂಟ್ ಅಂಡ್ ಆಂಡಿ ನಾರ್ಕೊಟಿಕ್ ಸ್ಪೆಶಲ್ ಸ್ಕ್ವಾಡ್ ಕಾರ್ಯಾಚರಣೆ ನಡೆಸಿದೆ. ಪ್ರಕರಣದಲ್ಲಿ ದಿಲೀಪ್ ಡಿ.ಸೋಜ, ರಾಜೇಶ್. ಕೆ, ಹಿತೇಶ್ ಕೆ.ಎಂಬಿವರ ವಿರುದ್ದ ಕೇಸು ದಾಖಲಿಸಲಾಗಿದೆ. ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ವಿಷ್ಣು ಪ್ರಕಾಶ್, ಇತರರಾದ ರಂಜಿತ್.ಕೆ.ವಿ, ಮುಹಮ್ಮದ್ ಕಬೀರ್, ರಮೇಶನ್, ಸೋನು ಸೆಬಾಸ್ಟಿಯನ್, ಶೈಲೇಶ್ ಕುಮಾರ್, ಮಂಜುನಾಥ ವಿ, ಮೋಹನ್ ಕುಮಾರ್, ಶಿಜಿತ್, ಧನ್ಯ ಟಿ.ವಿ. ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
Tags
ಬದಿಯಡ್ಕ
