ವಸತಿ ಗೃಹಕ್ಕೆ ಎಕ್ಸೈಸ್ ಅಧಿಕಾರಿಗಳಿಂದ ದಾಳಿ; 75 ಗ್ರಾಂ ಎಂಡಿಎಂಎ ಸಹಿತ ಓರ್ವನ‌ ಸೆರೆ


ಕಾಸರಗೋಡು: 75.11 ಗ್ರಾಂ ಎಂಡಿಎಂಎ ಸಹಿತ ಓರ್ವನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ
 ಕೊಳತ್ತೂರು ಮಞನಡ್ಕ ನಿವಾಸಿ ಕೆ.ಅಬ್ದುಲ್ ಶರೀಫ್(30) ಬಂಧಿತ ಆರೋಪಿ. ಕಾಸರಗೋಡು ಅಬಕಾರಿ ಸ್ಪೆಶಲ್ ಸ್ಕಾಡ್
ಇನ್ಸ್ಪೆಕ್ಟರ್ ಸಿ.ಸಂತೋಷ್ ಹಾಗೂ ತಂಡ ಆರೋಪಿಯನ್ನು ಬಂಧಿಸಿದೆ. ರಹಸ್ಯ ಮಾಹಿತಿಯನ್ವಯ ಪೆರಿಯನಗರದ ಗ್ರೂಪ್ ಟೆನ್ ಪ್ಲಾಸಾ ಎಂಬ ವಸತಿಗೃಹಕ್ಕೆ ದಾಳಿ‌ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಎಕ್ಸ್ಪ್ರೆಸ್ ಅಧಿಕಾರಿಗಳಾದ ಇನ್ಸ್ಪೆಕ್ಟರ್ ವಿಷ್ಣುಪ್ರಕಾಶ್, ಇತರರಾದ ಸಿಕೆವಿ ಸುರೇಶ್, ಪಿ.ರಾಜೇಶ್, ಟಿ.ಅಥುಲ್, ಚಾಲಕ‌ ಕ್ರಿಸ್ಟಿನ್  ಮೊದಲಾದವರು ‌ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು