ತಿರುವನಂತಪುರಂ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ SIR ತಿದ್ದುಪಡಿಗೆ ಇನ್ನಷ್ಟು ದಿನಗಳ ಅವಕಾಶ ನೀಡಲಾಗಿದೆ. ಇನ್ನಷ್ಟು ದಿನಗಳ ಅವಕಾಶ ನೀಡಲಾಗಿದೆಯೆಂದು ಮುಖ್ಯ ಚುನಾವಣಾ ಅಧಿಕಾರಿ ರತನ್ ಯು ಕೇಳ್ಕರ್ ಹೇಳಿದ್ದಾರೆ. 2025 ಡಿಸೆಂಬರ್ 23 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು ಸೇರ್ಪಡೆ, ತಿದ್ದುಪಡಿ ಹಾಗೂ ರದ್ದತಿಗಾಗಿ 2026 ಜನವರಿ 30 ರ ವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಇನ್ನಷ್ಟು ದಿನಗಳ ಅವಕಾಶ ನೀಡಲಾಗಿರುವುದು ರಾಜಕೀಯ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ.
Tags
ತಿರುವನಂತಪುರಂ
