ಬದಿಯಡ್ಕ: ಮಾರ್ಚ್ 1 ರಂದು ಬದಿಯಡ್ಕದಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಮಹಿಳಾ ಸಮಾವೇಶ ನಾಳೆ (ಫೆಬ್ರವರಿ 1 ಆದಿತ್ಯವಾರ) ಇಲ್ಲಿನ ಗಣೇಶ ಮಂದಿರದಲ್ಲಿ ಜರಗಲಿರುವುದು. ಬೆಳಗ್ಗೆ 9 ಗಂಟೆಗೆ ಕಂಬಾರ್ ಶ್ರೀ ಗುರುಮುಖ್ಯಪ್ರಾಣಾ ಮಠದ ಪರಮಪೂಜ್ಯ ಶ್ರೀ ಶ್ರೀ ಅಂಜನೇಶ್ವರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿರಾಟ್ ಹಿಂದೂ ಸಮಾಜೋತ್ಸವ ಸಮಿತಿಯ ಪದಾಧಿಕಾರಿಗಳು, ವಿವಿದ ಸಂಘಟನೆಗಳ ಕಾರ್ಯಕರ್ತರು, ಹಿಂದೂ ಬಾಂಧವರು ಭಾಗವಹಿಸುವರು.
Tags
ಬದಿಯಡ್ಕ

