ಮಣಿಯಂಪಾರೆ ಶ್ರೀದುರ್ಗಾಪರಮೇಶ್ವರೀ ಭಜನಾ ಮಂದಿರದ ಜೀರ್ಣೋದ್ಧಾರದ ಅದೃಷ್ಟ ಚೀಟಿ ಬಿಡುಗಡೆ


ಪೆರ್ಲ :ಮಣಿಯಂಪಾರೆ ದುರ್ಗಾನಗರದ ಶ್ರೀದುರ್ಗಾಪರಮೇಶ್ವರೀ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯದಂಗವಾಗಿ ಅದೃಷ್ಟ ಚೀಟಿ ಬಿಡುಗಡೆ ನಡೆಯಿತು. ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಉದ್ಯಮಿ ತಾರನಾಥ ರೈ- ಸಾಹಿತಿ ರಾಜಶ್ರೀ ಟಿ.ರೈ ದಂಪತಿಗಳು ಬಿಡುಗಡೆಗೊಳಿಸಿದರು. ಎಣ್ಮಕಜೆ ಪಂ.ಕ್ಷೇಮ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಕೃಷ್ಣ ನಾಯಕ್ ಶೇಣಿ ಪ್ರಥಮ‌ ಚೀಟಿಯನ್ನು ಅಣ್ಣು ನಾಯ್ಕ ಅರೆಮಂಗಿಲ ಅವರಿಗೆ ಹಸ್ತಾಂತರಿಸಿದರು.  ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುಂಞಣ್ಣ ಮಾಸ್ತರ್ ನೆಕ್ಕರೆಪದವು ಸಭೆಯ ಅಧ್ಯಕ್ಷತೆವಹಿಸಿದ್ದರು.

ಈ ಸಂದರ್ಭದಲ್ಲಿ ಮಂದಿರದ ಸ್ಥಾಪಕ ಸದಸ್ಯ ಗೋವಿಂದ ನಾಯ್ಕ ಅರೆಮಂಗಿಲ,   ಕೋಶಾಧಿಕಾರಿ ಉದಯ ಚೆಟ್ಟಿಯಾರ್ ಪೆರ್ಲ,ಸೇವಾ ಸಮಿತಿಯ ಅಧ್ಯಕ್ಷ ಅನಂದ ಅರೆಮಂಗಿಲ,ಗೋಪಾಲಕೃಷ್ಣ ಭಟ್ ನಿರೋಳ್ಯ, ಸುರೇಶ್ ನಾಯ್ಕ ಕೆದ್ರೋಳಿ, ಸುಜಿತಾ ಟೀಚರ್, ಪದ್ಮನಾಭ ಆಚಾರ್ಯ ಸೀತಾಂಗೋಳಿ,ಜಿ. ಸುಬ್ರಾಯ ನಾಯಕ್,ಕೃಷ್ಣ ನಾಯ್ಕ ಅರೆಮಂಗಿಲ,ಬಾಲಕೃಷ್ಣ ನಾಯ್ಕ್ ಏಳ್ಕಾನ ಮೊದಲಾದವರು ಪಾಲ್ಗೊಂಡಿದ್ದರು.ನಿತಿನ್ ಕುಮಾರ್ ಮಣಿಯಂಪಾರೆ ಸ್ವಾಗತಿಸಿ ಉಮೇಶ್ ಎಂ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು