ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತು ವರ್ಕಿಂಗ್ ಗ್ರೂಪ್‌ಗಳ ಸಭೆ ಗುರುವಾರ ಬದಿಯಡ್ಕ ಶ್ರೀ ಗುರುಸದನದಲ್ಲಿ ಜರಗಿತು. ಗ್ರಾಮಪಂಚಾಯಿತು ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿ ಮಾತನಾಡುತ್ತಾ ಗ್ರಾಮಪಂಚಾಯಿತಿಯ ಅಭಿವೃದ್ಧಿಗಾಗಿ ವಿವಿಧ ವಲಯಗಳ ಮೂಲಕ ಅನುಷ್ಠಾನಗೊಳ್ಳಬೇಕಾದ ಯೋಜನೆಗಳನ್ನು ನಿರ್ಧರಿಸಬೇಕು. ಕೃಷಿ, ಹೈನುಗಾರಿಕೆ, ಅಭಿವೃದ್ಧಿ, ರಸ್ತೆಗಳು, ನೀರಿನ ಸೌಕರ್ಯದಿಂದ ಜನತೆ ವಂಚಿತರಾಗಬಾರದು. ಗ್ರಾಮಪಂಚಾಯಿತಿನ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದರು. ಗ್ರಾಮಪಂಚಾಯಿತು ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನಾಡಿನ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿ ವಿವಿಧ ಯೋಜನೆಗಳ ರೂಪುರೇಷೆಗಳನ್ನು ತಯಾರಿಸಲಾಗುವುದು ಎಂದರು. ಜಿಲ್ಲಾ ಪಂಚಾಯಿತು ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲೋಕ್ ಪಂಚಾಯಿತಿ ಸದ್ಯರುಗಳಾದ ಮಹೇಶ್ ವಳಕ್ಕುಂಜ, ಖಾದರ್ ಮಾನ್ಯ, ಗ್ರಾಮಪಂಚಾಯಿತು ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಹಮೀದ್ ಕೆಡೆಂಜಿ, ರಜನಿ ಜಿ.ಆರ್., ಅವಿನಾಶ್ ರೈ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಶ್ಯಾಮಪ್ರಸಾದ ಮಾನ್ಯ, ಗಂಗಾಧರ ಗೋಳಿಯಡ್ಕ ಮಾತನಾಡಿದರು. ವಿವಿಧ ವಾರ್ಡುಗಳ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಪಂಚಾಯಿತು ಸದಸ್ಯರ ನೇತೃತ್ವದಲ್ಲಿ ವರ್ಕಿಂಗ್ ಗ್ರೂಪ್‌ಗಳ ಸಭೆ ನಡೆಯಿತು.
Tags
ಬದಿಯಡ್ಕ
