ಎಣ್ಮಕಜೆಯಲ್ಲಿ "ಮೇರಿ ಗಾವ್ ಮೇರಿ ಧರೋಹರ್" ಪ್ರತ್ಯೇಕ ಗ್ರಾಮ ಸಭೆ


ಪೆರ್ಲ : ಮೇರಿ ಗಾವ್ ಮೇರಿ ಧರೋಹರ್ ಎಂಬ ಧ್ಯೇಯವಾಕ್ಯದಲ್ಲಿ ಪಂಚಾಯತಿನಾದ್ಯಂತ ಇರುವ ಜಾನಪದ ಗ್ರಾಮೀಣ ಕಲೆ ಹಾಗೂ ಕಲಾವಿದರನ್ನು ಸಂಸ್ಕೃತಿಗಳನ್ನು ಸಂರಕ್ಷಿಸುವ ಉದಾತ್ತ ಯೋಜನೆಯ ವಿಪುಲೀಕರಣಕ್ಕಾಗಿ  ಎಣ್ಮಕಜೆ ಪಂಚಾಯತ್ ಸಭಾಂಗಣದಲ್ಲಿ  ಆಯೋಜಿಸಲ್ಪಟ್ಟ ಪ್ರತ್ಯೇಕ ಗ್ರಾಮ ಸಭೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಎಣ್ಮಕಜೆ ಪಂ.ಅಧ್ಯಕ್ಷೆ ಕುಸುಮಾವತಿ ಟೀಚರ್ ಉದ್ಘಾಟಿಸಿದರು. ಪಂ ಉಪಾಧ್ಯಕ್ಷ ಸಿದ್ದೀಕ್ ವಳಮುಗೇರ್ ಅಧ್ಯಕ್ಷತೆವಹಿಸಿದ್ದರು.ಪಂ‌. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಾಧಾಕೃಷ್ಣ ನಾಯಕ್ ಜೆ.ಎಸ್.ಶೇಣಿ, ರಮ್ಲ, ವಿಜಯ ಕಜಂಪಾಡಿ,ಪಂ.ಯೋಜನಾ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ರಾಜರಾಮ ಪೆರ್ಲ  ಹಾಗೂ ಪಂ.ಸದಸ್ಯರು,ಪಂ.ಕಾರ್ಯದರ್ಶಿ ಶಾನವಾಸ್, ಅಸಿಸ್ಟೆಂಟ್ ಕಾರ್ಯದರ್ಶಿ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು