ಬದಿಯಡ್ಕ: ಆಟೋ ರಿಕ್ಷಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದ ಗೂಡ್ಸ್ ಆಟೋ ಚಾಲಕ ನಿಧನರಾದರು. ಬದಿಯಡ್ಕದ ಗೂಡ್ಸ್ ಆಟೋ ಚಾಲಕ, ಬಾರಡ್ಕ ನಿವಾಸಿ ಅರವಿಂದ ಯಾನೆ ರವಿ(47) ಮೃತಪಟ್ಟವರು. ಇವರು ಬದಿಯಡ್ಕ ಸಬ್ ರಿಜಿಸ್ಟರ್ ಕಚೇರಿ ಬಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಬದಿಯಡ್ಕ ಪೇಟೆಯಲ್ಲಿ ಇವರು ಆಟೋ ರಿಕ್ಷಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು ಕೂಡಲೇ ಚೆಂಗಳ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ.
ದಿವಂಗತ ರಾಮ ಅವರ ಪುತ್ರರಾದ ಮೃತರು ತಾಯಿ ಕಮಲಾಕ್ಷಿ, ಪತ್ನಿ ಅಶ್ವಿನಿ, ಓರ್ವ ಪುತ್ರ, ಸಹೋದರರಾದ ರಾಜೇಂದ್ರಕುಮಾರ್, ಜ್ಯೋತಿ ಪ್ರಕಾಶ್, ಅನಿಲ್ ಕುಮಾರ್ ಎಂಬಿವರನ್ನು ಅಗಲಿದ್ದಾರೆ
Tags
ಬದಿಯಡ್ಕ
