ಮುಳಿಂಜ ಶಾಲೆಯಲ್ಲಿ ಇಕೋ ಕ್ಲಬ್ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ


 ಉಪ್ಪಳ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧೀನದಲ್ಲಿ ಇ.ಇ.ಪಿ. (ಎಸ್ಟ್‌ರನ್ ಮೆಂಟ್ ಎಜುಕೇಶನ್ ಪ್ರೋಗ್ರಾಂ) ಎಂಬ ಹೆಸರಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳು ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಯ ಹಸಿರು ಸೇನೆಯ ಅಧೀನದಲ್ಲಿರುವ ಈ ಕ್ಲಬ್‌ ಸದಸ್ಯರಿಗಾಗಿ ಪ್ರಕೃತಿ ಶಿಬಿರಗಳು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರಗಳು ಪರಿಸರ ಅಧ್ಯಯನ ಯೋಜನೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾ ಹಾಗೂ ಉಪಜಿಲ್ಲಾ ಮಟ್ಟಗಳಲ್ಲಿ ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ಇತ್ತೀಚೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ಮಂಜೇಶ್ವರ ಉಪಜಿಲ್ಲೆಯ ಇಕೋ ಕ್ಲಬ್ ನ ವಿದ್ಯಾರ್ಥಿಗಳಿಗೆ ಸುಸ್ಥಿರ ಅಭಿವೃದ್ಧಿಯನ್ನು ಲಕ್ಷ ವಾಗಿರಿಸಿಕೊಂಡು ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧಿಕೃತ ಉದ್ಘಾಟನೆಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಗೋಲ್ಡನ್ ರಹ್ಮಾನ್ ಅವರು ನೆರವೇರಿಸಿದರು.


ಕೇರಳದಲ್ಲಿನ ಸಾವಿರದ ಇನ್ನೂರು(1200) ಜೈವವೈವಿಧ್ಯ ಸಂರಕ್ಷಣಾ ಸಮಿತಿಗಳಲ್ಲಿ (ಬಿ.ಎಂ.ಸಿ) 2023ರ ಅತ್ಯುತ್ತಮ ಬಿ.ಎಂ.ಸಿ ಪ್ರಶಸ್ತಿಯನ್ನು ಪಡೆದ ಕಾಸರಗೋಡ್ ಜಿಲ್ಲಾ ಬಿ.ಎಂ.ಸಿ ನಂಚಾಲಕರೂ, ರಾಷ್ಟ್ರೀಯ ಹಸಿರು ಸೇನೆಯ ಕಾಸರಗೋಡ್ ಜಿಲ್ಲಾ ಸಂಯೋಜಕರೂ ಹಾಗೂ ನಿವೃತ್ತ ಸಸ್ಯಶಾಸ್ತ್ರ ಶಿಕ್ಷಕಿಯಾಗಿರುವ ಶ್ರೀಮತಿ ಸುಸ್ಮಿತ ಟಿ.ಎಂ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾದ ಉದ್ಘಾಟನಾ ಸಮಾರಂಭಕ್ಕೆ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾವತಿ ಚಿಗುರುಪಾದೆ ಅಧ್ಯಕ್ಷತೆ ವಹಿಸಿದ್ದರು. ನಮಾರಂಭಕ್ಕೆ ಶುಭಾಶಯಗಳನ್ನು ತಿಳಿಸಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ನಸೀಯ ಅಸೀನ್ ಮಾತನಾಡಿದರು. ಜಿ.ಎಚ್.ಎಸ್.ಎಸ್. ಮಂಗಲ್ಪಾಡಿಯ ಅಧ್ಯಾಪಕ ಶ್ರೀ ದಿನೇಶ್ ಅವರ ಧನ್ಯವಾದಗಳೊಂದಿಗೆ ಉದ್ಘಾಟನಾ ಸಮಾರಂಭ ಮುಕ್ತಾಯಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು