ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಾಂತ್ವನ; ಜಯನಗರ ಗೋಪಾಲಕೃಷ್ಣ ಭಜನಾ ಮಂದಿರ ಸದಸ್ಯರು ಸಂಗ್ರಹಿಸಿದ ನಿಧಿ ಹಸ್ತಾಂತರ, ವಿಶೇಷ ಪ್ರಾರ್ಥನೆ


 ಕುಂಬ್ಡಾಜೆ: ಮಾರ್ಪನಡ್ಕದಲ್ಲಿರುವ ಕೇರಳ ಗ್ರಾಮೀಣ ಬ್ಯಾಂಕ್ ನೌಕರ ಹಾಗೂ ಕುಂಟಿಕಾನ ಶ್ರೀ ಭಾರತಾಂಬಾ ಸೇವಾಟ್ರಸ್ಟ್ನ ಸಕ್ರಿಯ ಸದಸ್ಯ ಸಾಮಾಜಿಕ ಕಾರ್ಯಕರ್ತ ನೀರ್ಚಾಲು ದೇವರಮೆಟ್ಟು ನಿವಾಸಿ ನಳಿನಾಕ್ಷನ್ ಅವರು ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ದುಬಾರಿ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಕುಂಟಿಕಾನ ಶ್ರೀ ಭಾರತಾಂಬಾ ಸೇವಾ ಟ್ರಸ್ಟ್ ವತಿಯಿಂದ ಚಿಕಿತ್ಸೆಗೆ ನೆರವನ್ನು ಯಾಚಿಸಲಾಯಿತು. ಅನೇಕ ದಾನಿಗಳು ಸಹಕರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ನೇತೃತ್ವದಲ್ಲಿ  ಸಂಗ್ರಹಿಸಿದ 60,100:00 ರೂಪಾಯಿಯನ್ನು ಬದಿಯಡ್ಕ ಗ್ರಾಮಪಂಚಾಯಿತಿನ ನೀರ್ಚಾಲು ವಾರ್ಡು ಸದಸ್ಯ ಶ್ರೀ ಶ್ಯಾಮಪ್ರಸಾದ ಸರಳಿ ಹಾಗೂ ಶ್ರೀ ಭಾರತಾಂಬಾ ಸೇವಾ ಟ್ರಸ್ಟ್ನ ಉಪಾಧ್ಯಕ್ಷರಾದ ಶ್ರೀ ಈಶ್ವರಚಂದ್ರ ಪ್ರಸಾದ ಕುಳಮರ್ವ ಇವರಿಗೆ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ನಳಿನಾಕ್ಷನ್ ಶೀಘ್ರ ಗುಣಮುಖರಾಗಲು ವಿಶೇಷ ಪ್ರಾರ್ಥನೆಗೈದು ಹಸ್ತಾಂತರಿಸಲಾಯಿತು. 

ಈ ಸಂಧರ್ಭದಲ್ಲಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆಯನ್ನು ಮಂದಿರದ ಅಧ್ಯಕ್ಷರಾದ ಶ್ರೀ ಬಾಬು ಮಾಸ್ಟರ್ ಆಗಲ್ಪಾಡಿ ವಹಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿದರು, ಶ್ರೀ ಬಾಬು ಮಣಿಯಾಣಿ ಜಯನಗರ, ಶ್ರೀ ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು, ಶ್ರೀ , ಶ್ರೀ ಸುಧಾಮ ಪದ್ಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು