ಬದಿಯಡ್ಕ: ನರೇಂದ್ರ ಮೋದಿಯವರ ಜನ್ಮದಿನ ಹಾಗೂ 25 ವರುಷದ ಆಡಳಿತ ಪ್ರಯುಕ್ತ ಸೆಪ್ಟೆಂಬರ್ 17ರಿಂದ ಒಕ್ಟೋಬರ್ 17 ರ ವರೆಗೆ ನಡೆಯುವ ಸೇವಾ ಸಂಕಲ್ಪ ಅಭಿಯಾನದ ಸಲುವಾಗಿ ಪೆರಡಾಲ ಹದಿಮೂರನೇ ವಾರ್ಡಿನ ಅಂಗನವಾಡಿಗಳಲ್ಲಿ ಅಂಗನ್ ಕಾ ಉತ್ಸವ್ ಕಾರ್ಯಕ್ರಮ ನಡೆಸಲಾಯಿತು.
ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷೆ, ವಾರ್ಡ್ ಪ್ರತಿನಿಧಿ ಅಶ್ವಿನಿ ಕೆ ಯಂ ಅವರು ಅಂಗನವಾಡಿ ಕಾರ್ಯಕರ್ತೆಯರು ಹಲವಾರು ಕೆಲಸಗಳನ್ನು ಮಾಡುವುದರ ಜತೆಗೆ ಸಣ್ಣ ಮಕ್ಕಳನ್ನು ಬೆಳಗ್ಗಿನಿಂದ ಸಂಜೆ ವರೆಗೂ ಪ್ರೀತಿಯಿಂದ ನೋಡುತ್ತಿರುವುದು ಹೆತ್ತ ತಾಯಿಯ ತಾಳ್ಮೆಯೂ, ಮಮತೆಯು ಅವರಲ್ಲಿ ಇರುವ ಕಾರಣವೆಂದೂ ಅವರನ್ನು ಗೌರವಿಸಬೇಕಾದ್ದು ಪ್ರತಿಯೊರ್ವರ ಕರ್ತವ್ಯವೆಂದು ನುಡಿದರು.
ಪೊಯ್ಯಕಂಡ ಅಂಗನವಾಡಿಯಲ್ಲಿ ಕಾರ್ಯಕರ್ತೆ ಉಷಾ ಕುಮಾರಿ ಹಾಗೂ ಸಹಾಯಕಿ ಅನೀಷಾ ಅವರನ್ನು ಗೌರವಿಸಲಾಯಿತು.
ಬೀಜಂತಡ್ಕ ಅಂಗನವಾಡಿಯಲ್ಲಿ ಕಾರ್ಯಕರ್ತೆ ಚಂದ್ರಾವತಿ ಬಿ ಹಾಗೂ ಸಹಾಯಕಿ ಲೀಲಾ ಬಿ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
Tags
ಬದಿಯಡ್ಕ



