ಮಾರ್ಪನಡ್ಕದ ಗ್ರಾಮೀಣ ಬ್ಯಾಂಕಿಗೆ ಬಂದಿದ್ದ ಏತಡ್ಕ ನಿವಾಸಿ ಕುಸಿದು ಬಿದ್ದು ಮೃತ್ಯು


 ಕುಂಬ್ಡಾಜೆ:  ಮಾರ್ಪನಡ್ಕದ ಗ್ರಾಮೀಣ ಬ್ಯಾಂಕಿಗೆ ಬಂದಿದ್ದ ಏತಡ್ಕ ನಿವಾಸಿಯಾದ ಕೃಷಿಕರೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಏತಡ್ಕ ನಡುಮನೆ ನಿವಾಸಿ ರವೀಂದ್ರನಾಥ್ ಭಟ್(67) ಮೃತಪಟ್ಟವರು. ಇಂದು ಮದ್ಯಾಹ್ನ 1.45 ಕ್ಕೆ ಘಟನೆ ನಡೆದಿದೆ.
     ರವೀಂದ್ರ ನಾಥ್ ಅವರು ಬ್ಯಾಂಕಿಗೆ ಬಂದಿದ್ದಾಗ ಕುಸಿದು ಬಿದ್ದರೆನ್ನಲಾಗಿದೆ.‌ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. 
ಮೃತರು ಪತ್ನಿ ಲಲಿತ, ಮಕ್ಕಳಾದ ಸುಷ್ಮ, ನಿಷ್ಮ, ಅಳಿಯಂದಿರಾದ ವಿವೇಕ್, ವಿಕಾಸ್, ಸಹೋದರರಾದ ಸೂರ್ಯಪ್ರಕಾಶ್, ಜಯರಾಜ್, ಸಹೋದರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ     
  ಕುಂಬ್ಡಾಜೆ ಗ್ರಾಮ ಪಂಚಾಯತು ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ನಯನ, ಪ್ರಿಯಾಂಕ, ಸದಸ್ಯರುಗಳಾದ ಬಬಿತ, ಸೌಭಾಗ್ಯ ಲಕ್ಷ್ಮಿ, ಎಸ್.ಮುಹಮ್ಮದ್, ಮಹೇಶ್ ಸಹಿತ ಹಲವರು ಅಂತಿಮ ದರ್ಶನ ಪಡೆದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು