ಕಾಸರಗೋಡು: ಕರ್ತವ್ಯದ ವೇಳೆ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕೆಎಸ್ಇಬಿ (KSEB) ನೌಕರ ನಿಧನರಾಗಿದ್ದಾರೆ. ಬಳಾಂತೋಡು ಕೆಎಸ್ಇಬಿ ಕಚೇರಿಯ ಲೈನ್ಮನ್ ಕಲ್ಲಪ್ಪಳ್ಳಿ ಪಾಡಿ ಕೊಚ್ಚಿಯ ಸುರೇಶ್ (44) ಮೃತಪಟ್ಟವರು. ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.
ಕಳೆದ ಆಗಸ್ಟ್ 15 ರಂದು ಕಲ್ಲಪ್ಪಳ್ಳಿ ಪಾಡಿ ಕೊಚ್ಚಿಯಲ್ಲಿ ವಿದ್ಯುತ್ ಇಲ್ಲದ ಕಾರಣ ಸಮಸ್ಯೆಯನ್ನು ಪರಿಹರಿಸಲು ಫ್ಯೂಸ್ ಕಟ್ಟುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಬಳಿಕ ಸುರೇಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅವರನ್ನು ಸುಳ್ಯದ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರು ಅಣ್ಣಯ್ಯ ನಾಯಕ್ ಮತ್ತು ಮೀನಾಕ್ಷಿ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ: ಗಂಗಾ. ಮಕ್ಕಳು: ಧನುಶ್ರೀ, ಧನುಷ್ (ಇಬ್ಬರೂ ವಿದ್ಯಾರ್ಥಿಗಳು). ಸಹೋದರ-ಸಹೋದರಿಯರು: ನಂದಕುಮಾರ್, ಸಾವಿತ್ರಿ.
Tags
ಕಾಞಂಗಾಡ್
