ಬಾಲಗೋಕುಲ ಕಾಸರಗೋಡು ತಾಲೂಕು ಪ್ರಶಿಕ್ಷಣ ವರ್ಗ


 

ಕಾಸರಗೋಡು:  ಬಾಲಗೋಕುಲ ಕಾಸರಗೋಡು ತಾಲೂಕು ಪ್ರಶಿಕ್ಷಣ ವರ್ಗವು ಉಳಿಯತ್ತಡ್ಕ ಶ್ರೀ ಶಕ್ತಿ ಸಭಾಭವನದಲ್ಲಿ  ನಡೆಯಿತು. ರೆವೆನ್ಯೂ ಜಿಲ್ಲಾ ರಕ್ಷಾಧಿಕಾರಿ ಶ್ರೀ  ಜಯರಾಮ್ ಶೆಟ್ಟಿ ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ವಹಿಸಿದರು.ಕಾಸರಗೋಡು ತಾಲೂಕು ರಕ್ಷಾಧಿಕಾರಿ ಶ್ರೀ ಪ್ರವೀಣ್ ಕುಮಾರ್ ಮತ್ತು ಕಾಸರಗೋಡು ತಾಲೂಕು ಅಧ್ಯಕ್ಷರಾದ ಗೋವಿಂದ ನಾಯ್ಕ್ ಉಪಸ್ಥಿತರಿದ್ದರು.

ಎಂ. ಎ sir ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.ಮೊದಲ ಅವಧಿ ನಯ ರೂಪೀಕರಣ ತರಗತಿಯನ್ನು ಸದಾನಂದನ್ ಜೀ ನಡೆಸಿಕೊಟ್ಟರು. ವಂದೇ ಮಾತರಂ ಶಶಿಧರ್ ಮಾಯಿಪ್ಪಾಡಿ(ಜಿಲ್ಲಾ ಸಮಿತಿ ಸದಸ್ಯರು), ದೇಶಭಕ್ತಿ ಗೀತೆ ಸಮನ್ವಿತ ಗಣೇಶ್(ಶಾರದಾ ಬಾಲಗೋಕುಲದ ಶಿಕ್ಷಕಿ), ಕುಂಞುಣ್ಣಿ ಕವಿತೆಗಳು ಮಾಳವಿಕ ಕಾಞಂಗಾಡ್, ಭಗವದ್ಗೀತೆ ಶ್ರೀಲತಾ ಟೀಚರ್  (ಕಾಸರಗೋಡು ನಗರ ರಕ್ಷಾಧಿಕಾರಿ)ಹಾಗೂ ಕೊನೆಯ ಅವಧಿ ಗೋಕುಲ ಬೋಧಿನಿ ತರಗತಿಯನ್ನು ವೀಣ ಟೀಚರ್ ನಡೆಸಿಕೊಟ್ಟರು.ಆಟೋಟ ಸ್ಪರ್ಧೆಯನ್ನು ನವೀನ್ ಮನ್ನಿ ಪ್ಪಾಡಿ (ಮಧೂರು ಮಂಡಲ ಅಧ್ಯಕ್ಷರು)ಜಯಪ್ರಕಾಶ್ ಮಾಯಿಪ್ಪಾಡಿ(ಮಧೂರು ಮಂಡಲ ಸದಸ್ಯರು) ನಡೆಸಿಕೊಟ್ಟರು.ಸಮಾರೋಪ ಸಮಾರಂಭದಲ್ಲಿ ಎಂ.ಸತ್ಯನ್ ಮಾಸ್ಟರ್ (ಕೇರಳ ರಾಜ್ಯ ಉಪಾಧ್ಯಕ್ಷರು) , ವೀಣಾ ಟೀಚರ್ (ರೆವೆನ್ಯೂ ಜಿಲ್ಲಾ ಭಗಿನಿ ಪ್ರಮುಖ್), ಜಯಕುಮಾರ್ (ಕಾಸರಗೋಡು ಖಂಡ ಆರ್.ಎಸ್.ಎಸ್.ಸೇವಾ ಪ್ರಮುಖ್)ಮತ್ತು ಕಾಸರಗೋಡು ತಾಲೂಕು ಕಾರ್ಯದರ್ಶಿ ಹರ್ಷರಾಜ್ ಉಪಸ್ಥಿತರಿದ್ದರು.ಕಾಸರಗೋಡು ತಾಲೂಕಿನ 42 ಬಾಲಗೋಕುಲಗಳಲ್ಲಿ 28 ಬಾಲಗೋಕುಲಗಳ ಶಿಕ್ಷಕಿ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದಾರೆ.ಒಟ್ಟಾಗಿ 150ಕ್ಕಿಂತ ಮೇಲ್ಪಟ್ಟು ಕಾರ್ಯಕರ್ತರು ಪ್ರಶಿಕ್ಷಣ ವರ್ಗದಲ್ಲಿ ಭಾಗಿಯಾಗಿದ್ದಾರೆ.ಕಾಸರಗೋಡು ತಾಲೂಕಿನ ಗೋಕುಲೋತ್ಸವವನ್ನು  ಡಿಸೆಂಬರ್ ತಿಂಗಳ 27ನೇ ತಾರೀಕಿನಂದು ಮಾಡುವುದಾಗಿ ಘೋಷಿಸಲಾಯಿತು.ಪ್ರಶಿಕ್ಷಣ ವರ್ಗದ ವಿವಿಧ ಕಾಲಾಂಶದ ನಿಯಂತ್ರಕರಾಗಿ ಭಾಗ್ಯರಾಜ್ (ಕಾಸರಗೋಡು ನಗರ ಅಧ್ಯಕ್ಷರು )ಹಾಗೂ ಸಮಯ ಪಾಲಕರಾಗಿ ಮಂಜುನಾಥ್ ಸನಾತನ ಬಾಲಗೋಕುಲದ ಪ್ರಮುಖ್ ಸಹಕರಿಸಿದರು.ಸಮಾರೋಪ ಸಮಾರಂಭದ ನಿರೂಪಣೆಯನ್ನು ಕಾಸರಗೋಡು ತಾಲೂಕು ಭಗಿನಿ ಸಹಪ್ರಮುಖ್ ಶ್ರಾವ್ಯ ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು